ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆಎಸ್‌ಎಸ್‌ಎಪಿ ವತಿಯಿಂದ ಸಾಂಸ್ಕೃತಿಕ ಸಂಭ್ರಮ

ಕೆಎಸ್‌ಎಸ್‌ಎಪಿ ವತಿಯಿಂದ ಸಾಂಸ್ಕೃತಿಕ ಸಂಭ್ರಮ


ಮಂಗಳೂರು: ರಾಣಿ ಪುಷ್ಪಲತಾ ದೇವಿ ಸಾರಥ್ಯದಲ್ಲಿ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಟಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂಸ್ಕೃತಿ ವೈಭವ ಕಾರ್ಯಕ್ರಮವು ಮಂಗಳೂರಿನ ಕುದ್ಮಲ್ ರಂಗ ರಾವ್ ಪುರಭವನದಲ್ಲಿ ಅದ್ದೂರಿಯಾಗಿ ಜರುಗಿತು.


ಕೆಎಸ್‌ಎಸ್‌ಎಪಿ ಮಂಗಳೂರು ಅಧ್ಯಕ್ಷೆ ಶ್ರೀಮತಿ ರಾಣಿ ಪುಷ್ಪಲತಾ ದೇವಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಹರಿರಾವ್ ಶಂಕರ್, ರಾಜೇಶ್ ಜೆ, ಗಂಗಾಧರ ಗಾಂಧಿ ಉಪಸ್ಥಿತರಿದ್ದರು. ಈ ಸಮಾರಂಭದ ವೇದಿಕೆಯಲ್ಲಿ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಬಹಳ ವೈವಿಧ್ಯಪೂರ್ಣವಾಗಿ ಜರುಗಿತು.


ದೀಕ್ಷಾ, ಸದಾಶಿವ ಪೈಕ, ವಿಜಿತಾ ಕೇಶವನ್, ಸನುಷ ಸುನಿಲ್, ನಂದನ, ಸನುಷ ಸುಧಾಕರನ್, ಹರಿತಾ ಕುಮಾರಿ, ಧನ್ಯಶ್ರೀ, ಸುಶ್ಮಿತಾ, ಸಂದ್ಯಾ, ಉಮಾವತಿ, ಅಹನಾ ಎಸ್ ರಾವ್, ವಿಷ್ಣು ಸುಧಾಕರನ್, ಉಷಾ ಸುಧಾಕರನ್, ಪ್ರಶಾಂತ್ ವಿಟ್ಲ, ಜಯರಾಮ್ ಚಾoಗೋಳಿ, ಡಾ. ವಾಣಿಶ್ರೀ ಕಾಸರಗೋಡು ಹಾಗೂ ಗುರುರಾಜ್ ಕಾಸರಗೋಡು ಮೊದಲಾದ ಕಲಾವಿದರು ತಮ್ಮ ಪ್ರತಿಭೆಯನ್ನು ಮೆರೆದರು.


ಸಂಘದ ಸಂಸ್ಥಾಪಕಾಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ಕನ್ನಡ ಎಂದರೆ ಕೇವಲ ಭಾಷೆ ಮಾತ್ರ ಅಲ್ಲ, ಕನ್ನಡ ಎಂದರೆ ಸಂಸ್ಕೃತಿ ಕನ್ನಡ ಎಂದರೆ ಸಂಸ್ಕಾರ ಕನ್ನಡ ಎಂದರೆ ಅಕ್ಷರಗಳ ಸರಮಾಲೆ ಮಾತ್ರವಲ್ಲ ಅದರಲ್ಲಿ ಮಾತೃ ಹೃದಯವಿದೆ ಎಂದು ಸೊಗಸಾದ ನಿರೂಪಣೆ ಮಾಡಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم