ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕ ದಳ ಮೂಲ್ಕಿ ವತಿಯಿಂದ ಮಳೆಗಾಲದ ಸಿದ್ಧತೆ, ಉಪಕರಣಗಳ ಪರೀಕ್ಷೆ

ಗೃಹರಕ್ಷಕ ದಳ ಮೂಲ್ಕಿ ವತಿಯಿಂದ ಮಳೆಗಾಲದ ಸಿದ್ಧತೆ, ಉಪಕರಣಗಳ ಪರೀಕ್ಷೆ


ಮಂಗಳೂರು: ಜಿಲ್ಲಾಧಿಕಾರಿಗಳ ಆದೇಶದಂತೆ ಮೂಲ್ಕಿ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ಮೂಲ್ಕಿ ನಗರ ಪಂಚಾಯತ್ ಸಹಕಾರದೊಂದಿಗೆ ಗೃಹರಕ್ಷಕದಳ ಮೂಲ್ಕಿ ವತಿಯಿಂದ ಮಳೆಗಾಲದ ಪ್ರವಾಹ ರಕ್ಷಣಾ ತಂಡವು ಮೂಲ್ಕಿ ಶಾಂಭವಿ ನದಿಯಲ್ಲಿ ಇನ್‌ಫ್ಲೇಟೇಬಲ್ ಬೋಟ್ (ಗಾಳಿ ತುಂಬುವ ಬೋಟ್) ಹಾಗೂ, ಬೋಟ್ ಇಂಜಿನ್ ಕಾರ್ಯಕ್ಷಮತೆ ಪರೀಕ್ಷೆ ನಡೆಸಿತು.


ಈ ಸಂದರ್ಭದಲ್ಲಿ ತಹಶೀಲ್ದಾರವರು ಪ್ರವಾಹ ಸಂದರ್ಭದಲ್ಲಿ ಪಾಲಿಸಬೇಕಾದ ಮುನ್ನಚ್ಚರಿಕೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ. ಜಿ ಗುರುಪ್ರಸಾದ್, ಮೂಲ್ಕಿ ಹೋಬಳಿ ಕಂದಾಯ ನಿರೀಕ್ಷಕರಾದ ಜಿ. ಎಸ್ ದಿನೇಶ್, ಸ್ಥಳೀಯ ನಗರ ಪಂಚಾಯತ್ ಸದಸ್ಯೆ ದಯಾವತಿ, ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಲೋಕೇಶ್ ಚಿತ್ರಾಪು, ಪ್ರವಾಹ ರಕ್ಷಣಾ ತಂಡದ ಸದಸ್ಯರು, ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳು ಭಾಗವಹಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم