ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ರೋಮನ್ ಅಂಡ್ ಕ್ಯಾಥರೀನ್ ಲೋಬೋ ವಸತಿ ಶಾಲೆಯ ಜಂಟಿ ಆಶ್ರಯದಲ್ಲಿ ಹೆಲೆನ್ ಕೆಲ್ಲರ್ ಜಯಂತಿಯನ್ನು ಇಂದು (ಜೂನ್ 27) ಆಚರಿಸಲಾಯಿತು.
ಹೆಲೆನ್ ಕೆಲ್ಲರ್ ಸ್ವತಃ ಅಂದತ್ವದ ಕಷ್ಟಗಳನ್ನು ಅನುಭವಿಸಿ, ಕಿವುಡು ಮತ್ತು ದೃಷ್ಟಿ ವಿಕಲಚೇತನ ಉಳ್ಳ ಪ್ರಥಮ ಪದವೀಧರೆ. ಅವರು ಸಮಾಜದಲ್ಲಿ ಕಿವುಡು ಮತ್ತು ದೃಷ್ಟಿ ವಿಕಲಚೇತನವಿರುವ ವ್ಯಕ್ತಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮ ವಹಿಸಿದವರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಕ್ಯಾಲಿಸ್ಟಸ್ ಡೆಸಾ ಸ್ವಾಗತಿಸಿದರು ಹಾಗೂ ಹೆಲನ್ ಕೆಲ್ಲರ್ ಅವರ ಜೀವನದ ಸಂದೇಶಗಳಾದ ದಿವ್ಯಾಂಗರಿಗೆ ಅವಕಾಶ ನೀಡಿರಿ ಕರುಣೆ ಬೇಡ ಎಂಬುದಾಗಿ ವಿವರಿಸಿದರು. ಸಕ್ಷಮ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರು ಶ್ರೀ ಡಾಕ್ಟರ್ ಮುರುಳಿಧರ್ ನಾಯಕ್ ಅಧ್ಯಕ್ಷೀಯ ಭಾಷಣ ಮಾಡುತ್ತಾ ಜೀವನದಲ್ಲಿ ಛಲವಿರಬೇಕು ಎಂದು ಹೆಲನ್ ಕೆಲರ್ ಅವರ ಸಾಧನೆಯನ್ನು ಸ್ಮರಿಸಿದರು ಶ್ರೀ ವಿನೋದ್ ಶೆಣೈ ಸಕ್ಷಮ ಕರ್ನಾಟಕ ಉಪಾಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಸಕ್ಷಮ ದಕ್ಷಿಣ ಜಿಲ್ಲಾ ಘಟಕ ಕಾರ್ಯದರ್ಶಿ ಶ್ರೀ ಹರೀಶ್ ಪ್ರಭು ಇವರು ಧನ್ಯವಾದಗಳನ್ನು ಸಮರ್ಪಿಸಿದರು ನರೇಂದ್ರ ಭಟ್, ಶ್ರೀ ಶ್ರೀನಿವಾಸ ಪೈ ಕೋಶಾಧಿಕಾರಿ ಸಕ್ಷಮ ದ ಕನ್ನಡ ಜಿಲ್ಲಾ ಘಟಕ ಇವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಿರ್ವಹಿಸಿದರು.
ರಥಬೀದಿ ಮಂಗಳೂರು ದಯಾನಂದ ಪೈ ಫಸ್ಟ್ ಗ್ರೇಡ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಭಾಗವಹಿಸಿದರು ರೋಮನ್ ಆಂಡ್ ಕ್ಯಾಥರಿನ್ ಶಾಲೆಯ ಮಕ್ಕಳು, ಅಧ್ಯಾಪಕ ವೃಂದ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು ಸಕ್ಷಮ ದ.ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق