ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಣ್ಮಕಜೆ: ಎಂಜಿಎಲ್‌ಸಿ ಶಿಕ್ಷಕಿ ಮತ್ತು ಸಹಾಯಕಿಗೆ ಬೀಳ್ಕೊಡುಗೆ

ಎಣ್ಮಕಜೆ: ಎಂಜಿಎಲ್‌ಸಿ ಶಿಕ್ಷಕಿ ಮತ್ತು ಸಹಾಯಕಿಗೆ ಬೀಳ್ಕೊಡುಗೆ


ಪೆರ್ಲ: ಎಣ್ಮಕಜೆ ಗ್ರಾ.ಪಂ. ಶಿವಗಿರಿ ಎಂಜಿಎಲ್‌ಸಿ (ಏಕೋಪಾಧ್ಯಾಯ) ಶಾಲೆಯಲ್ಲಿ 2000ದಿಂದ 2022ರ ವರೆಗೆ ಸೇವೆ ಸಲ್ಲಿಸಿದ್ದ ಶಿಕ್ಷಕಿ ಗೀತಾ ಎಂ ಹಾಗೂ ಸಹಾಯಕಿ ಕಮಲ ಅವರನ್ನು ಹಳೆ ವಿದ್ಯಾರ್ಥಿಗಳು ಮತ್ತು ಊರವರ ನೇತೃತ್ವದಲ್ಲಿ ಭಾನುವಾರ ಬೀಳ್ಕೊಡಲಾಯಿತು.


ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಸಮಾರಂಭ ಉದ್ಘಾಟಿಸಿದರು. ವಾರ್ಡ್ ಸದಸ್ಯೆ ಇಂದಿರಾ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ‌ ಕಾರ್ಯಕರ್ತ ಶ್ರೀನಿವಾಸ ಪೆರಿಕ್ಕಾನ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಹರೀಶ್ ಕೆ. ಸ್ವಾಗತಿಸಿದರು. ಸುಮಿತ್ರ ವಂದಿಸಿದರು. ಹರಿಣಾಕ್ಷಿ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 تعليقات

إرسال تعليق

Post a Comment (0)

أحدث أقدم