ಮಂಗಳೂರು: ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಪೈ (74) ಅವರು ಬೆಂಗಳೂರಿನಲ್ಲಿ ಬುಧವಾರ ದೈವಾಧೀನರಾದರು.
ಅವರು ಪತ್ನಿ, ಇಬ್ಬರು ಪುತ್ರರಾದ ಒರೆಕಲ್ ಕಂಪೆನಿಯ ಅರವಿಂದ ಪೈ, ಡೆಲಿವರಿ ಲಾಜಿಸ್ಟಿಕ್ ನಿರ್ದೇಶಕ ಅಜಿತ್ ಪೈ ಹಾಗೂ ಅಪಾರ ಸಂಖ್ಯೆಯ ಬಂಧು, ಮಿತ್ರರನ್ನು ಅಗಲಿದ್ದಾರೆ.
ಗುರುವಾರ ಮಧ್ಯಾಹ್ನ ಮಂಗಳೂರಿನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಖ್ಯಾತ ಸಂಸ್ಥೆ ಮಾಡರ್ನ್ ಕಿಚನ್ ಇದರ ಪಾಲುದಾರರಾಗಿರುವ ಶ್ರೀಯುತರು ಪರೋಪಕಾರಿಯಾಗಿ, ಸಮಾಜದ ಸೇವಾ ಚಟುವಟಿಕೆಗಳಲ್ಲಿ ತೊಡಗಿ ಜನಪರ ಕಾಳಜಿಯನ್ನು ಹೊಂದಿದ್ದರು.
ಸಾಹುಕಾರ್ ಬಾಬಾ ಪೈ ಮನೆತನದವರಾದ ಅಣ್ಣಪ್ಪ ಪೈಯವರು ರಾಘವೇಂದ್ರ ರಂಗ ಪೈ ಅವರ ಸುಪುತ್ರರಾಗಿದ್ದಾರೆ.
ಜಿಲ್ಲಾ ಸಣ್ಣ ಕೈಗಾರಿಕಾ ಅಸೋಸಿಯೇಶನ್ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಅಧ್ಯಕ್ಷರಾಗಿ, ಮಾರ್ಡನ್ ಕಿಚನ್ & ಪ್ರೆಸ್ಟೋ ಬ್ರಾಂಡಿನ ಉತ್ಪನ್ನಗಳ ಯಶಸ್ಸಿನ ಹಿಂದಿನ ಪ್ರೇರಣಾ ಶಕ್ತಿಯಾಗಿ, M/s ರಾಘವೇಂದ್ರ ರಂಗ ಪೈ ( ಆರ್.ಆರ್.ಪೈ) ಇದರ ಪಾಲುದಾರರಾಗಿ, ಏಸ್ ಫುಡ್ಸ್ ಪ್ರೈ ಲಿ. ಇದರ ಆಡಳಿತ ನಿರ್ದೇಶಕರಾಗಿ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿಯೂ ಅವರು ಜನಮಾನಸದಲ್ಲಿ ನೆಲೆಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment