ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳ ದೇವರ ದರ್ಶನ ಪಡೆದು ಹಿಂತಿರುವಾಗ ರಸ್ತೆ ಅಪಘಾತ; ಅಪ್ಪ ಮಗ ಸಾವು

ಧರ್ಮಸ್ಥಳ ದೇವರ ದರ್ಶನ ಪಡೆದು ಹಿಂತಿರುವಾಗ ರಸ್ತೆ ಅಪಘಾತ; ಅಪ್ಪ ಮಗ ಸಾವು

 


ಚಿಕ್ಕಮಗಳೂರು: ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಅಪ್ಪ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ.


ಬೆಂಗಳೂರಿನ ರಾಜಾಜಿನಗರ ಮೂಲದ ನರಸಿಂಹರಾಜ್ (46) ಹಾಗೂ ಕಿರಣ್ (23) ಮೃತ ದುರ್ದೈವಿಗಳು.


ನರಸಿಂಹರಾಜ್ ಹಾಗೂ ಕುಟುಂಬಸ್ಥರು ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದು ಹಿಂದಿರುಗುತ್ತಿದ್ದರು. ಮುತ್ತಿಗೆಪುರ ಗ್ರಾಮದ ಬಳಿ ಬರುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ.


ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 Comments

Post a Comment

Post a Comment (0)

Previous Post Next Post