ಹಾವೇರಿ : ಸಾಲಬಾಧೆಯಿಂದ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕು ಲಿಂಗದಹಳ್ಳಿ ಗ್ರಾಮ ರೈತ ವಾಸಪ್ಪ (55) ಆತ್ಮಹತ್ಯೆ ಮಾಡಿಕೊಂಡ ರೈತ.
4 ಎಕರೆ ಜಮೀನು ಹೊಂದಿದ್ದು ನಾಲ್ಕು ಲಕ್ಷ ಸಾಲ ಮಾಡಿ ಬೆಳೆ ಹಾಕಿದ್ದರು. ಆದರೆ ಸಕಾಲದಲ್ಲಿ ಮಳೆ ಬಾರದೆ ಇದ್ದುದರಿಂದ ಬಿತ್ತಿದ ಮೆಕ್ಕೆಜೋಳ ಹಾನಿಯಾಗಿ ಲಕ್ಷಾಂತರ ಹಣ ಕಳೆದುಕೊಂಡಿದ್ದರು.
ಇದರಿಂದ ಮನನೊಂದ ವಾಸಪ್ಪ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Post a Comment