ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಲು ಜಾರಿ ನೀರಿಗೆ ಬಿದ್ದು ಇಬ್ಬರು ಸಾವು

ಕಾಲು ಜಾರಿ ನೀರಿಗೆ ಬಿದ್ದು ಇಬ್ಬರು ಸಾವು



 ತುಮಕೂರು: ಶಿರಾ ತಾಲ್ಲೂಕಿನ ಕುಂಟೆಗೌಡನಹಳ್ಳಿ ಗ್ರಾಮದ ಕಟ್ಟೆಯಲ್ಲಿ ಬುಧವಾರ ಸಂಜೆ ಹಸು ಮೈ ತೊಳೆಯಲು ಹೋಗಿ ತಾತ ಹಾಗೂ ಮೊಮ್ಮಗ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.


ಕುಂಟೆಗೌಡನಹಳ್ಳಿ ಗ್ರಾಮದ ಕರಿಯಣ್ಣ (60) ಹಾಗೂ ಮೊಮ್ಮಗ ದಿಲೀಪ್ (12) ಮೃತರು.

ಹಸುಗಳಿಗೆ ಕಟ್ಟೆಯಲ್ಲಿ ಮೈ ತೊಳೆಯುತ್ತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಮೊಮ್ಮಗ ದಿಲೀಪ್ ನೀರಿನಲ್ಲಿ ಬಿದ್ದಿದ್ದಾನೆ.

ಮೊಮ್ಮಗನನ್ನು ಕಾಪಾಡಲು ತಾತ ಕರಿಯಣ್ಣ ಸಹ ನೀರಿಗೆ ದುಮುಕಿದ್ದು ಕೆಸರಿನಲ್ಲಿ ಸಿಲುಕಿ ಇಬ್ಬರು ಮೃತ ಪಟ್ಟಿದ್ದಾರೆ.


ಕಳ್ಳಂಬೆಳ್ಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


0 Comments

Post a Comment

Post a Comment (0)

Previous Post Next Post