ಶಿವಮೊಗ್ಗ: ಕಾರ್ ರಿವರ್ಸ್ ತೆಗೆಯುವ ವೇಳೆ ಚಕ್ರಕ್ಕೆ ಸಿಲುಕಿ ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.
ಕಡೇಕಲ್ ನ ಶಮೀನಾ ಖಾನಂ ಅವರು ಮಕ್ಕಳೊಂದಿಗೆ ಸೂಳೆಬೈಲ್ ನಲ್ಲಿರುವ ಸಹೋದರಿ ಮನೆಗೆ ಸಹೋದರ ಇನಾಯತ್ ವುಲ್ಲಾ ಖಾನ್ ಅವರ ಕಾರ್ ನಲ್ಲಿ ಆಗಮಿಸಿದ್ದಾರೆ.
ಸಹೋದರಿ ಮನೆ ಬಳಿ ಸೋದರಿ ಮತ್ತು ಮಕ್ಕಳನ್ನು ಇಳಿಸಿ ಮನೆಗೆ ಮರಳಲು ಇನಾಯತ್ ವುಲ್ಲಾ ಖಾನ್ ಅವರು ಕಾರ್ ತಿರುಗಿಸಿಕೊಳ್ಳುವ ವೇಳೆ ಮಗು ಬೀಬೀ ಲೀಜಾ ಆಕಸ್ಮಿಕವಾಗಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
إرسال تعليق