ಕೋಲಾರ : ತಮ್ಮದೇ ಜಮೀನನಲ್ಲಿ ಪತಿ ಉಳುಮೆ ಮಾಡುತ್ತಿದ್ದ ವೇಳೆ ಕೃಷಿಯಂತ್ರ ಟ್ರಾಕ್ಟರ್ ರೋಟರೇಟರ್ ಗೆ ಸಿಲುಕಿ ಪತ್ನಿ ಮೃತಪಟ್ಟ ಘಟನೆಯೊಂದು ವೇಮಗಲ್ ಹೋಬಳಿಯ ಕಲ್ವಮಂಜಲಿ ಗ್ರಾಮದಲ್ಲಿ ನಡೆದಿರುವುದು ಮಾಹಿತಿ ದೊರಕಿವೆ.
ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಕಲ್ವಮಂಜಲಿ ಗ್ರಾಮದ ರಾಜೇಶ್ ಎಂಬವರ ಪತ್ನಿ ಸೌಮ್ಯಾ(35) ಮೃತಪಟ್ಟವರಾಗಿದ್ದಾರೆ.
ರಾಜೇಶ್ ಕೃಷಿ ಇಲಾಖೆಯಿಂದ ಬಾಡಿಗೆಗೆ ಟ್ರಾಕ್ಟರ್ ರೋಟರೇಟರ್ ತಂದು ರವಿವಾರ ತಮ್ಮ ಜಮೀನನಲ್ಲಿ ಉಳುಮೆ ಮಾಡುತ್ತಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ಗೆ ಕರೆ ಬಂದಿದ್ದರಿಂದ ಸೌಮ್ಯಾ ಪತಿಗೆ ಮೊಬೈಲ್ ನೀಡಲು ಟ್ರಾಕ್ಟರ್ ಬಳಿ ಬಂದಿದ್ದಾರೆ.
ಆಗ ಆಕಸ್ಮಿಕವಾಗಿ ಸೌಮ್ಯಾ ಅವರ ಸೀರೆಯ ಸೆರಗು ಟ್ರಾಕ್ಟರ್ ಚಕ್ರಕ್ಕೆ ಸಿಲುಕಿತೆನ್ನಲಾಗಿದೆ. ಇದರಿಂದ ಟ್ರ್ಯಾಕ್ಟರ್ ನಡಿಗೆ ಸೆಳೆಯಲ್ಪಟ್ಟ ಸೌಮ್ಯಾರ ದೇಹ ಛಿದ್ರ ಛಿದ್ರಗೊಂಡಿದೆ.
ಉಳುಮೆ ಮಾಡುವಾಗ ಪತಿ-ಪತ್ನಿ ಇಬ್ಬರೇ ಇದ್ದರು ಎನ್ನಲಾಗಿದೆ.
ವೇಮಗಲ್ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ.
إرسال تعليق