ಮಂಗಳೂರು: ಹೆಸರಾಂತ ಕೊಂಕಣಿ ಸಾಹಿತಿ, ಹಾಸ್ಯ ಸಾಹಿತ್ಯ ಬರಹಗಾರ 'ಸಿಜಿಎಸ್ ತಾಕೋಡ್'ಎಂದೇ ಜನಪ್ರಿಯರಾಗಿದ್ದ ಸಿರಿಲ್ ಜಿ ಸಿಕ್ವೇರ (71) ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದ.ಕ. ಜಿಲ್ಲೆಯ ತಾಕೋಡ್‌ನಲ್ಲಿ ಜನಿಸಿದ ಸಿರಿಲ್ 12ನೇ ವಯಸ್ಸಿನಲ್ಲಿ ಕೊಂಕಣಿಯಲ್ಲಿ ಬರೆಯಲು ಪ್ರಾರಂಭಿಸಿದರು. ಅವರು ರಾಕ್ಣೋ ವಾರಪತ್ರಿಕೆಯ ಉಪ ಸಂಪಾದಕರಾಗಿದ್ದರು. ನಂತರ 'ಕಾಣಿಕ' ಮತ್ತು 'ಉಮಾಳೊ'ಕೊಂಕಣಿ ನಿಯತಕಾಲಿಕೆಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಸಿಜಿಎಸ್ ಕೊಂಕಣಿ ಬಾಷಾ ಮಂಡಲ್, ಗೋವಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಸಂದೇಶ, ದಾಯ್ಜಿ ದುಬೈ ಮತ್ತು ಕೊಂಕಣಿ ಕುಟುಮ್ ಬಹರೈನ್ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಮತ್ತು ಕೊಂಕಣಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
Post a Comment