ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರ್ಕಳ ಸಾಹಿತ್ಯ ಸಂಘದ ಬೆಳ್ಳಿ ಹಬ್ಬ ಸರಣಿ: ಪಂಪನ ಆಯ್ಕೆಯ ಎಂಟು ಪಾತ್ರಗಳ ಕುರಿತು ಉಪನ್ಯಾಸ

ಕಾರ್ಕಳ ಸಾಹಿತ್ಯ ಸಂಘದ ಬೆಳ್ಳಿ ಹಬ್ಬ ಸರಣಿ: ಪಂಪನ ಆಯ್ಕೆಯ ಎಂಟು ಪಾತ್ರಗಳ ಕುರಿತು ಉಪನ್ಯಾಸ



ಕಾರ್ಕಳ: ಇಲ್ಲಿನ ಸಾಹಿತ್ಯ ಸಂಘದ ರಜತ ಮಹೋತ್ಸವ ವರ್ಷಾಚರಣೆಯ 15ನೇ ಕಾರ್ಯಕ್ರಮ ಹೋಟೆಲ್ ಪ್ರಕಾಶ್‌ನ ಎಂ. ರಾಮಚಂದ್ರ ವೇದಿಕೆಯಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ನಿವೃತ್ತ ಪ್ರಿನ್ಸಿಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಅವರು ಪಂಪನ ಆಯ್ಕೆಯ ಎಂಟು ಪಾತ್ರಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.


ಪಂಪನ ಆಯ್ಕೆಯಲ್ಲಿ ದುರ್ಯೋಧನನ ಛಲ, ಅರ್ಜುನನ ಸಾಹಸ, ಭೀಮನ ಪೌರುಷ, ಭೀಷ್ಮನ ಔನ್ನತ್ಯ, ಕರ್ಣನ ಉದಾರತೆಗಳನ್ನು ಸಭೆಯ ಮುಂದೆ ಪ್ರಸ್ತುತಪಡಿಸಿದರು.


ಪುಂಡಿಕಾಯಿ ಗಣಪಯ್ಯ ಭಟ್‌, ಸಂಘದ ಕೋಶಾಧಿಕಾರಿ ನಿತ್ಯಾನಂದ ಪೈ, ಹಿರಿಯ ನ್ಯಾಯವಾದಿ ಸನತ್ ಕುಮಾರ್ ಜೈನ್‌, ಎಸ್‌.ಆರ್‌. ಅರುಣ್‌ ಕುಮಾರ್‌, ಸುರೇಶ್‌ ಚಂದ್ರ, ಶ್ರೀರಂಗ ಜೋಷಿ ಮಾಳ ಉಪಸ್ಥಿತರಿದ್ದರು.


ಇತ್ತೀಚೆಗೆ ನಿಧನರಾದ ಸಂಘದ ಹಿತೈಷಿ ಡಾ. ಯಶೋವರ್ಮ ಅವರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.


ಸಾಹಿತ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಎಸ್‌. ಗೋವಿಂದ ಪ್ರಭು ಸ್ವಾಗತಿಸಿದರು. ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ. ಪದ್ಮನಾಭ ಗೌಡ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم