ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸ ಇಂದು

ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸ ಇಂದು


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಇದರ ಆಶ್ರಯದಲ್ಲಿ ಇಂದು (ಮೇ 31) ಮೂರು ದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ. ಮೊದಲನೇ ದತ್ತಿ ಉಪನ್ಯಾಸ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಮತ್ತು ಕನ್ನಡ ವಿಭಾಗ ಸಂತ ಆಗ್ನೆಸ್ ಸ್ವಾಯತ್ತ ಕಾಲೇಜು ಮಂಗಳೂರು ಇವರ ಸಹಯೋಗದೊಂದಿಗೆ ದಿ. ಎ.ಆರ್.ಡಿ’ಸೋಜಾ ದತ್ತಿ ಕಾರ್ಯಕ್ರಮ (ದತ್ತಿ ಕೊಡುಗೆ ಶ್ರೀ ಬ್ಲೇಸಿಯಸ್ ಡಿ’ಸೋಜಾ ಕಂಕನಾಡಿ ಮಂಗಳೂರು). ಕರ್ನಾಟಕದಲ್ಲಿ ಕ್ರೈಸ್ತರ ಇತಿಹಾಸ ಮತ್ತು ಕನ್ನಡ ಸಾಹಿತ್ಯಕ್ಕೆ ಕ್ರೈಸ್ತರ ಕೊಡುಗೆ ವಿಚಾರದ ಬಗ್ಗೆ ದತ್ತಿ ಉಪನ್ಯಾಸ ಜರುಗಲಿದೆ.


ಬೆಳಿಗ್ಗೆ 9:30ರಿಂದ 10:00 ಗಂಟೆಯವರೆಗೆ ಈ ಉಪನ್ಯಾಸ ಜರುಗಲಿದ್ದು, ಸಂತ ಆಗ್ನೆಸ್ ಕಾಲೇಜು ಮಂಗಳೂರು ಸೆಮಿನಾರ್ ಹಾಲ್ ಸೋಫಿಯ ಬ್ಲಾಕ್ ಇಲ್ಲಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಬೆನೆಟ್ ಜಿ.ಅಮ್ಮನ್ನ ಕಾರ್ಯಕಾರಿ ಸಮಿತಿ ಸದಸ್ಯರು ಕಸಾಪ ಮಂಗಳೂರು ಘಟಕ ಇವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಸಂತ ಆಗ್ನೆಸ್‌ ಸ್ವಾಯತ್ತ ಕಾಲೇಜು ಇದರ ಪ್ರಾಂಶುಪಾಲರಾದ ಡಾ|| ಎಂ ವೆನಿಸ್ಸಾ ಎ.ಸಿ ಇವರು ಉದ್ಘಾಟಿಸಲಿದ್ದಾರೆ. ಎರಡನೇ ದತ್ತಿ ಕಾರ್ಯಕ್ರಮ ಶ್ರೀ ಭಾರತೀ ಕಾಲೇಜು ನಂತೂರು, ಪದವು ಕಸಾಪ ಕಛೇರಿ ಇಲ್ಲಿ ಬೆಳಿಗ್ಗೆ 11:00 ರಿಂದ 12:00 ಗಂಟೆಯವರೆಗೆ ಜರುಗಲಿದೆ.


ಮೊದಲನೇ ದತ್ತಿ ಉಪನ್ಯಾಸದ ವಿಷಯ “ಕರ್ನಾಟಕದಲ್ಲಿ ನಾಥ ಸಂಪ್ರದಾಯ” ಎಂಬುದ್ದಾಗಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಡಾ|| ಮೀನಾಕ್ಷಿ ರಾಮಚಂದ್ರ ಅವರು ಭಾಗವಹಿಸಲಿದ್ದಾರೆ. ಮೂರನೇ ದತ್ತಿ ಉಪನ್ಯಾಸದ ವಿಚಾರ ‘ಸಣ್ಣ ಪತ್ರಿಕೆಗಳು ಮತ್ತು ಸಾಹಿತ್ಯ’ ಎಂಬೂದಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಡಾ|| ಮುರಲೀ ಮೋಹನ್ ಚೂಂತಾರು ಅವರು ಭಾಗವಹಿಸಲಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಈ ಎರಡು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಮಂಜುನಾಥ್ ಎಸ್.ರೇವಣಕರ್ ಅವರು ವಹಿಸಲಿದ್ದಾರೆ. ಇಲ್ಲಿ ಸಾಹಿತ್ಯ ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಕಸಾಪ ಮಂಗಳೂರು ತಾಲೂಕು ಇದರ ಕಾರ್ಯದರ್ಶಿಯವರಾದ ಶ್ರೀ ಗಣೇಶ್ ಪ್ರಸಾದ್‍ಜೀ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

web counter

0 Comments

Post a Comment

Post a Comment (0)

Previous Post Next Post