ಧರ್ಮತ್ತಡ್ಕ: ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ 2022-23 ಶೈಕ್ಷಣಿಕ ವರ್ಷದ ಎಂಟನೇ ತರಗತಿಯ ವಿದ್ಯಾರ್ಥಿಗಳ ಹೆತ್ತವರ ಸಭೆಯು ಮೇ 30 ರಂದು ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್ ವಹಿಸಿಮಾತನಾಡುತ್ತಾ "ಹೆತ್ತವರು ಶಾಲೆಯ ಮೇಲೆ ಅಭಿಮಾನ ಇರಿಸಿ ವಿದ್ಯಾರ್ಥಿಗಳನ್ನು ನಮ್ಮ ಶಾಲೆಗೆ ಕಳುಹಿಸಿದ್ದು ಅಭಿನಂದನಾರ್ಹ ಎಂದರು".
ಶಾಲಾ ಮುಖ್ಯೋಪಾಧ್ಯಾಯರಾದ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ "ಶಾಲೆಯಲ್ಲಿ ವಿದ್ಯಾರ್ಥಿಗಳು ವಹಿಸಬೇಕಾದ ಶಿಸ್ತು ಅಚ್ಚುಕಟ್ಟುತನ, ಹೆತ್ತವರು ವಿದ್ಯಾರ್ಥಿಯ ಕಲಿಕೆಯಲ್ಲಿ ವಹಿಸಬೇಕಾದ ಕಾಳಜಿಯ ಬಗ್ಗೆ ಹೆತ್ತವರಿಗೆ ನಿರ್ದೇಶವನ್ನು ನೀಡಿದರು".
ಎಂಟನೇ ತರಗತಿ ಅಧ್ಯಾಪಕರಾದ ಶ್ರೀ ಶಶಿಕುಮಾರ್ ಪಿ, ಶ್ರೀಮತಿ ವಿದ್ಯಾ ಸರಸ್ವತಿ, ಶ್ರೀಮತಿ ಎನ್ ಗಂಗಮ್ಮ, ಶ್ರೀಮತಿ ವಿಚೇತ ಬಿ, ಶ್ರೀ ಶಶಿಧರ ಕೆ ಉಪಸ್ಥಿತರಿದ್ದರು ತರಗತಿಯ ವಿದ್ಯಾರ್ಥಿಗಳ ಹೆತ್ತವರ ಸಭೆಯ ನಿರ್ವಹಣೆಯನ್ನು ಅಧ್ಯಾಪಕರಾದ ಶ್ರೀ ಪ್ರಶಾಂತ ಹೊಳ್ಳ ವಹಿಸಿದರು, ಶ್ರೀ ಶಶಿಧರ ಕೆ ವಂದಿಸಿದರು.
Post a Comment