ಕಾರ್ಕಳ: 2022 ನೇ ಮಾರ್ಚ್/ಎಪ್ರಿಲ್ ನಲ್ಲಿ ನಡೆದ SSLC ಪರೀಕ್ಷೆಯಲ್ಲಿ 621/625 ಅಂಕಗಳನ್ನು ಪಡೆದು, ಕಾರ್ಕಳ ತಾಲೂಕಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ನಿಟ್ಟೆಯ ಡಾ| ಎನ್.ಎಸ್.ಎ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ನಿಶ್ಮಿತ್ ರವರನ್ನು ಕಾರ್ಕಳ ತಾಲೂಕು ಪಂಚಾಯತ್ ಹಾಗೂ ಕಾರ್ಕಳ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಜಂಟಿಯಾಗಿ ಮೇ 23 ರಂದು ಇಂಧನ ಸಚಿವರಾದ ವಿ. ಸುನಿಲ್ ಕುಮಾರ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರರವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق