ಪ್ಯಾರಿಸ್: ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಎಲಿಜಬೆತ್ ಬೋರ್ನ್ ಅವರು ಸೋಮವಾರ ನೇಮಕಗೊಂಡಿದ್ದು, ದೇಶದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಎರಡನೇ ಮಹಿಳೆಯಾಗಿದ್ದಾರೆ.
61 ವರ್ಷದ ಬೋರ್ನ್ ಅವರು ಜೀನ್ ಕ್ಯಾಸ್ಟೆಕ್ಸ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಬೋರ್ನ್ ಪೂರ್ಣ ಪ್ರಮಾಣದ ಸರ್ಕಾರವನ್ನು ನೇಮಿಸುವ ನಿರೀಕ್ಷೆಯಿದೆ.
ಬೋರ್ನ್ ಅವರು 2020 ರಿಂದ ಮ್ಯಾಕ್ರನ್ ಅವರ ಹಿಂದಿನ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು ಅವರು ಸಾರಿಗೆ ಸಚಿವರಾಗಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment