ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಬಿ. ಯಶೋವರ್ಮರ ಪಾರ್ಥಿವ ಶರೀರ ಉಜಿರೆಗೆ ಆಗಮನ, ಅಭಿಮಾನಿಗಳಿಂದ ಅಂತಿಮ ಗುರು ನಮನದ ಬಳಿಕ ಅಂತ್ಯಸಂಸ್ಕಾರ

ಡಾ. ಬಿ. ಯಶೋವರ್ಮರ ಪಾರ್ಥಿವ ಶರೀರ ಉಜಿರೆಗೆ ಆಗಮನ, ಅಭಿಮಾನಿಗಳಿಂದ ಅಂತಿಮ ಗುರು ನಮನದ ಬಳಿಕ ಅಂತ್ಯಸಂಸ್ಕಾರ


ಅಂಬುಲೆನ್ಸ್‍ನಲ್ಲಿ ಪಾರ್ಥಿವ ಶರೀರವನ್ನು ಪಾದಯಾತ್ರೆಯೊಂದಿಗೆ ಮೆರವಣಿಗೆಯಲ್ಲಿ ಕಾಲೇಜು ಆವರಣಕ್ಕೆ ತರಲಾಯಿತು.


ಉಜಿರೆ: ಭಾನುವಾರ ತಡರಾತ್ರಿ ಅಲ್ಪಕಾಲದ ಅನಾರೋಗ್ಯದಿಂದ ಸಿಂಗಾಪುರದಲ್ಲಿ ನಿಧನರಾದ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರ ಪಾರ್ಥಿವ ಶರೀರವನ್ನು ಸಿಂಗಾಪುರದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ತರಲಾಯಿತು.


ಅಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಅಂತಿಮ ನಮನಗಳೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಬೆಂಗಳೂರಿನಿಂದ ಅಂಬುಲೆನ್ಸ್‍ನಲ್ಲಿ ಪಾರ್ಥಿವ ಶರೀರವನ್ನು ಚಾರ್ಮಾಡಿ ಗ್ರಾಮದ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತರಲಾಯಿತು.


ಅಲ್ಲಿಂದ ವಾಹನ ಜಾಥಾದ ಮೂಲಕ ಉಜಿರೆ ಸರ್ಕಲ್‍ಗೆ ಬಂದು ಅಲ್ಲಿಂದ ಎಸ್.ಡಿ.ಎಂ. ಕಾಲೇಜಿಗೆ ತಂದು ಸಾರ್ವಜನಿಕರಿಗೆ ಅಂತಿಮ ನಮನಗಳೊಂದಿಗೆ ಶ್ರದ್ಧಾಂಜಲಿ ಸಮರ್ಪಿಸಲು ಅವಕಾಶ ನೀಡಲಾಯಿತು.


ಬಳಿಕ ಉಜಿರೆ ಗ್ರಾಮದ ನೀರಚಿಲುಮೆ ಬಳಿ ಇರುವ ಡಾ. ಬಿ. ಯಶೋವರ್ಮರ ಸ್ವಗೃಹ “ನಿನಾದ”ದ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.


ಅಂತಿಮ ನಮನಗಳೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದ ಗಣ್ಯರು: ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್, ಸದಸ್ಯರುಗಳಾದ ಕೆ. ಹರೀಶ್ ಕುಮಾರ್, ಕೆ. ಪ್ರತಾಪಸಿಂಹ ನಾಯಕ್, ಭೋಜೇ ಗೌಡ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಹಂಪಿ ಕನ್ನಡ ವಿ.ವಿ. ನಿವೃತ್ತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ, ಜಾನಪದ ವಿ.ವಿ. ನಿವೃತ್ತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ, ಮಂಗಳೂರು ವಿ.ವಿ. ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ, ಮಾಜಿ ಸಚಿವ ಪಿ.ಜಿ. ಆರ್. ಸಿಂಧ್ಯಾ, ಮೂಡ ಮಾಜಿ ಅಧ್ಯಕ್ಷ ಕೆ. ಸುರೇಶ ಬಳ್ಳಾಲ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಎಸ್.ಡಿ.ಎಂ. ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ರಾಜೇಂದ್ರ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮೊದಲಾದ ಗಣ್ಯರು ದಿವಂಗತ ಡಾ. ಬಿ. ಯಶೋವರ್ಮರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم