ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಹರಿಕೃಷ್ಣ ಭರಣ್ಯರ ನಾಲ್ಕು ಕೃತಿಗಳ ಬಿಡುಗಡೆ

ಡಾ. ಹರಿಕೃಷ್ಣ ಭರಣ್ಯರ ನಾಲ್ಕು ಕೃತಿಗಳ ಬಿಡುಗಡೆ


ನೀರ್ಚಾಲು: ಮಧುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥರು ಹಾಗೂ ಹಿರಿಯ ಲೇಖಕರಾದ ಡಾ. ಹರಿಕೃಷ್ಣ ಭರಣ್ಯ ಅವರು ರಚಿಸಿದ ವ್ಯೂಹ, ಭಾರ್ಗವ ಶಾರ್ದೂಲ, ವಿನಾಶ ಕಾಲೇ ಮತ್ತು ಕಾಲಚಕ್ರ ಎಂಬ ನಾಲ್ಕು ಕೃತಿಗಳು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ವಠಾರದಲ್ಲಿ ಬಿಡುಗಡೆಯಾದವು.


ಹಿರಿಯ ಯಕ್ಷಗಾನ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರು ಕೃತಿಗಳನ್ನು ಬಿಡುಗಡೆಗೊಳಿಸಿದರು. ಸಿರಿಚಂದನ ಯುವ ಬಳಗ ಕಾಸರಗೋಡು ಮತ್ತು ಮಹಾಜನ ವಿದ್ಯಾವರ್ಧಕ ಸಂಘದ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.


ಮಹಾಜನ ವಿದ್ಯಾಸಂಸ್ಥೆಗಳ ಅಧ್ಯಕ್ಷ ಜಯದೇವ ಖಂಡಿಗೆ ಅವರು ದೀಪಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ ಯು ಮಹೇಶ್ವರಿ, ಪ್ರಾಧ್ಯಾಪಕ ಡಾ ರತ್ನಾಕರ ಮಲ್ಲಮೂಲೆ, ಬಾಲಕೃಷ್ಣ ಬೇರಿಕೆ ಹಾಗೂ ತೆಕ್ಕುಂಜ ಕುಮಾರಸ್ವಾಮಿ ಅವರು ಪುಸ್ತಕಗಳ ಪರಿಚಯ ಮಾಡಿದರು.


ಕೃತಿಕಾರರಾದ ಡಾ ಭರಣ್ಯ ಅವರು ಮಾತನಾಡಿ, ತಮ್ಮ ಅಧ್ಯಯನ ಮತ್ತು ಸಾಹಿತ್ಯ ಚಟುವಟಿಕೆಗಳ ಬಗ್ಗೆ ನೆನಪಿಸಿಕೊಂಡರು. ನಿವೃತ್ತಿಯ ನಂತರದ ಅಧ್ಯಯನ ಮತ್ತು ಕೃತಿ ರಚನೆಗಳ ಬಗ್ಗೆ ಉಲ್ಲೇಖಿಸುತ್ತ, ಪ್ರಸ್ತುತ ತಮ್ಮ ಪ್ರಕಟಿತ ಕೃತಿಗಳ ಸಂಖ್ಯೆ 50ಕ್ಕೆ ತಲುಪಿರುವುದನ್ನು ಪ್ರಸ್ತಾಪಿಸಿದರು.


ಇದೇ ಸಂದರ್ಭದಲ್ಲಿ ಪ್ರೊ. ಸುಬ್ರಾಯ ಭಟ್ಟರ ಶತಮಾನದ ಸಂಸ್ಮರಣಾ ಕಾರ್ಯಕ್ರಮ ನಡೆಯಿತು. ಎರಡೂ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಡಾ. ಪ್ರಮೀಳಾ ಮಾಧವ ವಹಿಸಿದ್ದರು. ಪ್ರೊ. ಸುಬ್ರಾಯ ಭಟ್ಟರ ಪುತ್ರಿ ಹಾಗೂ ಶಿಕ್ಷಕಿ ವಾಣಿ ಪಿ.ಎಸ್‌ ಅವರು, ತಮ್ಮ ಏಳನೆಯ ವಯಸ್ಸಿನಲ್ಲಿ ಮರೆಯಾದ ತಂದೆಯವರ ಸಮಗ್ರ ವ್ಯಕ್ತಿತ್ವದ ಚಿತ್ರಣವು ಬಂಧು-ಮಿತ್ರರು ಶಿಷ್ಯವರ್ಗ ಹಾಗೂ ಸಮಕಾಲೀನ ಸಾಹಿತಿಗಳ ಮೂಲಕ ದೊರಕುತ್ತಿದೆ ಎಂದು ನೆನಪಿಸಿಕೊಂಡರು.


ಸಿರಿಚಂದನ ವೇದಿಕೆಯ ಅಧ್ಯಕ್ಷ ಕಾರ್ತಿಕ್‌ ಪಡ್ರೆ ಶುಭ ಹಾರೈಸಿದರು. ಸ್ನೇಹಲತಾ ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಎಂ.ಕೆ ಶಿವಪ್ರಕಾಶ್ ವಂದಿಸಿದರು.

0 Comments

Post a Comment

Post a Comment (0)

Previous Post Next Post