ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಹರಿಕೃಷ್ಣ ಭರಣ್ಯ ವಿರಚಿತ ನಾಲ್ಕು ಕೃತಿಗಳ ಬಿಡುಗಡೆ ಮೇ 8ಕ್ಕೆ

ಡಾ. ಹರಿಕೃಷ್ಣ ಭರಣ್ಯ ವಿರಚಿತ ನಾಲ್ಕು ಕೃತಿಗಳ ಬಿಡುಗಡೆ ಮೇ 8ಕ್ಕೆ



ಕಾಸರಗೋಡು: ಡಾ. ಹರಿಕೃಷ್ಣ ಭರಣ್ಯ ವಿರಚಿತ ನಾಲ್ಕು ಕೃತಿಗಳ ಬಿಡುಗಡೆ ಹಾಗೂ ಪ್ರೊ. ಪಿ. ಸುಬ್ರಾಯ ಭಟ್‌ ಸಂಸ್ಮರಣೆ ಕಾರ್ಯಕ್ರಮ ಮೇ 8ರಂದು ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಹಿರಿಯ ಪ್ರೌಢಶಾಲೆಯಲ್ಲಿ ನಡೆಯಲಿದೆ.


ಮಹಾಜನ ವಿದ್ಯಾಭಿವರ್ಧಕ ಸಂಘ ಪೆರಡಾಲ ಮತ್ತು ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ಸಹಭಾಗಿತ್ವದಲ್ಲಿ ಬೆಳಗ್ಗೆ 9:30ರಿಂದ ಮಧ್ಯಾಹ್ನ 1:30ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


ವಿದ್ವಾಂಸರಾದ ಬೆಳ್ಳಿಗೆ ನಾರಾಯಣ ಮಣಿಯಾಣಿ ಮತ್ತು ಕಸೂತಿ ತಜ್ಞೆ ಸಾಹಿತಿ ಶ್ರೀಮತಿ ಶಶಿಕಲಾ ಬಾಯಾರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.


ಬಿಡುಗಡೆಯಾಗಲಿರುವ ಪುಸ್ತಕಗಳು: ವ್ಯೂಹ, ವಿನಾಶಕಾಲೇ, ಭಾರ್ಗವ ಶಾರ್ದೂಲ ಮತ್ತು ಕಾಲಚಕ್ರ. ವಿಶ್ರಾಂತ ಇಂಜಿನಿಯರ್ ಹಾಗೂ ಸಾಹಿತಿ ತೆಕ್ಕುಂಜ ಕುಮಾರಸ್ವಾಮಿ, ವಿಶ್ರಾಂತ ಪ್ರಾಧ್ಯಾಪಿಕೆ ಡಾ. ಯು. ಮಹೇಶ್ವರಿ , ಕಾಸರಗೋಡಿನ ಸರಕಾರಿ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಹಾಗೂ ಇಂಗ್ಲಿಷ್ ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಅವರು ಕ್ರಮವಾಗಿ ಈ ಕೃತಿಗಳನ್ನು ಪರಿಚಯಿಸಲಿದ್ದಾರೆ.


ಸಿರಿಚಂದನ ಬಳಗದ ಅಧ್ಯಕ್ಷ ಕಾತ್ರಿಕ್ ಪಡ್ರೆ ಶುಭಾಶಂಸನೆ ಮಾಡಲಿದ್ದಾರೆ.  ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಅವರಿಂದ ಸ್ವಾಗತ, ವಿಶ್ರಾಂತ ಪ್ರಾಧ್ಯಾಪಿಕೆ ಡಾ. ಪ್ರಮೀಳಾ ಮಾಧವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರೊ. ಪಿ ಸುಬ್ರಾಯ ಭಟ್ಟರ ಸಂಸ್ಮರಣೆ ನಡೆಸಿಕೊಡಲಿದ್ದಾರೆ. ಹಿರಿಯ ಅಧ್ಯಾಪಕಿ ಶ್ರೀಮತಿ ವಾಣಿ ಪಿ.ಎಸ್‌ ಅವರಿಂದ ನುಡಿನಮನ ಪ್ರಸ್ತುತಿ, ಕಥೆಗಾರ್ತಿ ಶ್ರೀಮತಿ ಸ್ನೇಹಲತಾ ದಿವಾಕರ್ ಅವರಿಂದ ನಿರೂಪಣೆ ಹಾಗೂ ನೀರ್ಚಾಲು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಕೆ ಶಿವಪ್ರಕಾಶ ವಂದನಾರ್ಪಣೆ ಮಾಡಲಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post