ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಹೇಮಾವತಿ ವೀ. ಹೆಗ್ಗಡೆಯವರಿಗೆ ಅಭಿನಂದನೆ

ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಹೇಮಾವತಿ ವೀ. ಹೆಗ್ಗಡೆಯವರಿಗೆ ಅಭಿನಂದನೆ


ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಭಾನುವಾರ ಊರಿನ ಶ್ರಾವಕರು ಮತ್ತು ಶ್ರಾವಕಿಯರು ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಹೇಮಾವತಿ ವೀ. ಹೆಗ್ಗಡೆಯವರನ್ನು ಅಭಿನಂದಿಸಿದರು.


ಉಜಿರೆ: ಧರ್ಮಸ್ಥಳದಲ್ಲಿ ಉತ್ತಮ ಸೇವೆ ಮತ್ತು ಉನ್ನತ ಸಾಧನೆಗೆ ವಿಫುಲ ಅವಕಾಶಗಳಿದ್ದು ಎಲ್ಲರೂ ತಮಗೆ ಸಿಕ್ಕಿದ ಅವಕಾಶಗಳ ಸದುಪಯೋಗ ಮಾಡಿದಾಗ ಜೀವನ ಪಾವನವಾಗುತ್ತದೆ, ಬದುಕು ಸಾರ್ಥಕವಾಗುತ್ತದೆ ಎಂದು ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.


ಶಿಕ್ಷಣ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿ ಮಾಡಿದ ಅನುಪಮ ಸೇವೆಗಾಗಿ ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕøತರಾದ ಅವರನ್ನು ಊರಿನ ಶ್ರಾವಕರು, ಶ್ರಾವಕಿಯರು ಮತ್ತು ಬಾಹುಬಲಿ ಸೇವಾ ಸಮಿತಿಯ ಸರ್ವಸದಸ್ಯರು ಅಭಿನಂದನೆಗಳೊಂದಿಗೆ ಅಭಿವಂದಿಸಿ  ಗೌರವಿಸಿದರು.


ತಮಗೆ ಕೆಲಸ ಮಾಡುವುದರಲ್ಲಿ ಮಾತ್ರ ಉತ್ಸಾಹ ಅಲ್ಲದೆ ಪ್ರದರ್ಶನ, ಪ್ರಚಾರದ ಆಸಕ್ತಿ ಇಲ್ಲ. ಶ್ರಾವಕರು ಮತ್ತು ಶ್ರಾವಕಿಯರು ಸ್ವಯಂ ಪ್ರೇರಣೆಯಿಂದ ಹಾಗೂ ಬಹಳ ಉತ್ಸಾಹದಿಂದ ಎಲ್ಲಾ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಭಾಗವಹಿಸುತ್ತಾರೆ. ಲಕ್ಷದೀಪೋತ್ಸವ, ದೇವರ ಉತ್ಸವ, ಸಮವಸರಣ ಪೂಜೆ, ಅಷ್ಟವಿಧಾರ್ಚನೆ, ಬಾಹುಬಲಿ ಮಹಾಮಸ್ತಕಾಭಿಷೇಕ, ಪಂಚಕಲ್ಯಾಣ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು, ಮುನಿಗಳಿಗೆ ಆಹಾರದಾನ, ವಿಹಾರ, ಸ್ವಾಗತ ಇತ್ಯಾದಿ ಎಲ್ಲಾ ಸೇವೆಗಳಲ್ಲಿಯೂ ಎಲ್ಲರೂ ಈಗ ತಜ್ಞರಾಗಿದ್ದಾರೆ. ಎಲ್ಲರ ಉತ್ಸಾಹದ ಸೇವೆ, ಸಹಕಾರ ತಮಗೆ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲು ಪ್ರೋತ್ಸಾಹದೊಂದಿಗೆ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.


ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.


ಉದಯ ಜೈನ್ ಸ್ವಾಗತಿಸಿದರು. ಡಾ. ಶಶಿಕಾಂತ್ ಜೈನ್ ಧನ್ಯವಾದವಿತ್ತರು. ವಾರ್ಷಿಕೋತ್ಸವದ ಅಂಗವಾಗಿ ಬಸದಿಯಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ, ನಾಂದಿಮಂಗಲ, ವಾಸ್ತು ಪೂಜಾ ವಿಧಾನ, ಜಿನ ಸಹಸ್ರನಾಮ, ಷೋಡಸ ಕಲಶಾಭಿಷೇಕ, ನವಗ್ರಹ ಶಾಂತಿ, ಸಹಸ್ರನಾಮ ಕುಂಕುಮಾರ್ಚನೆ, ಗ್ರಾಮಬಲಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.

ಸೋಮವಾರ ವಜ್ರಪಂಜರ ಆರಾಧನೆ ನಡೆಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post