ಬೆಂಗಳೂರು: ನಗರದಲ್ಲಿ ಕಳೆದ ಅನೇಕ ದಿನಗಳಿಂದ ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ಪಾದಚಾರಿಗಳಿಗೆ ಮಾರ್ಗವಿಲ್ಲದೆ ಪರಾದಾಟ. ಇದು ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣದಿಂದ ಕೊಗಳತೆ ದೊರದಲ್ಲಿ ಇರುವ ಚಾರಿ ಮಾರ್ಗದ ಮೇಲೆ ಅನಾಥವಾಗಿ ಒಂದು ನೋ ಪಾರ್ಕಿಂಗ್ ಎಂಬ ದೊಡ್ಡ ಕಂಬ ಬಿದಿದ್ದು, ಪಾದಚಾರಿಗಳು ಇತ್ತ ಪಾದಾಚಾರಿ ಮಾರ್ಗವು ಇಲ್ಲದೆ, ಅತ್ತ ರಸ್ತೆಯ ತುಂಬಾ ವಾಹನಗಳ ದಟ್ಟಣೆಯ ನಡುವೆ ಕೆಲಸಕ್ಕೆ ಹೋಗುವ ಜನರು ಹಾಗೂ ಶಾಲಾ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಅನಾಥವಾಗಿ ಬಿದ್ದಿರುವ ಕಂಬ ನೋಡಿ ಹಿಡಿಶಾಪ ಹಾಕುತ್ತ ಸಾಗುತ್ತಿದ್ದ ದೃಶ್ಯ ಕಂಡು ಬಂತು. ಗೋಪಾಲ್ ನ್ ಮಾಲ್ ಹಿಂಭಾಗದ ದ್ವಾರ ದ ಪಾದಚಾರಿ- ಮಾರ್ಗದಲ್ಲಿ ಕಲ್ಲುಗಳ ರಾಶಿ ರಾಶಿ ಆದರೆ,
ಪಾದಚಾರಿಗಳಿಗೆ ಮಾರ್ಗವಿದ್ದೂ ಇಲ್ಲಾದಂತಾಗಿದ್ರೆ ಅತ್ತ ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಾ ಇರುವುದು ವಿಪರ್ಯಾಸವೇ ಸರಿ. ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಬಿಬಿಎಂಪಿ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ ಹಾಗೂ ಸಚಿವರಾದ ಮುನಿರತ್ನ ಅವರೇ ಇತ್ತ ನೋಡಿ!
ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳೀಯರ ಮನವಿ:
ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ಹಾಗೂ ಗೋಪಾಲನ್ ಮಾಲ್ನ ಹಿಂಭಾಗದಲ್ಲಿ ಇರುವ ಗೇಟ್ ಬಳಿ ಬಸ್ ಕಾಯುತ್ತ ನಿಲ್ಲುವ ನಾಗರಿಕರು ಹಾಗೂ ಕೆಲಸಕ್ಕೆ ಹೋಗುವ ಕಾರ್ಮಿಕರು ಮತ್ತು ಶಾಲೆ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಕ್ಷೇತ್ರದ ಶಾಸಕ ಮುನಿರತ್ನ ಅವರು ಇತ್ತ ನೋಡಿ ಒಂದು ಬಸ್ ನಿಲ್ದಾಣ ನಿರ್ಮಾಣ ಮಾಡಿ ಕೊಡ ಅದರಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿಶ್ರಾಂತಿ ಪಡೆಯಲು ಕೊಠಡಿ ಜೊತೆ ಒಂದು ಪುಟ್ಟ ಗ್ರಂಥಲಾಯ ನಿರ್ಮಿಸಿ ಕೊಡಿ ಎಂದು ಹಿರಿಯ ನಾಗರಿಕರ ಒಬ್ಬರು ವಿನಂತಿಸಿಕೊಂಡಿದ್ದು, ಆದರೆ ಅವರ ಹೆಸರು ಹೇಳಲು ಬಯಸಲಿಲ್ಲ!
ಮೌನ ವ್ರತದಲ್ಲಿ ನಿಂತಿತ್ತು ಬಿಬಿಎಂಪಿ ವಾಹನ ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ. ಅದನ್ನು ಸಹ ಚಿತ್ರದಲ್ಲಿ ಸೆರೆಹಿಡಿಯಾಲಾಗಿದೆ.
ಪಾದಚಾರಿ ಮಾರ್ಗದಲ್ಲಿ ಹೊಂಡ- ಅದರಲ್ಲಿ ಕಸ, ಬಾಟಲಿ ಹಾಗೂ ಪೆಪೇಸಿ ಕುಡಿದು ಹಾಕಿದ್ದಾರೆ ನಗರದ ಮಹಾನ್ ಪ್ರಜೆಗಳು....
ರಾಜರಾಜೇಶ್ವರಿ ನಗರದ ಕಮಾನು ಮುಂಭಾಗದಲ್ಲಿ ನಾಗರೀಕರಿಗೆ ಪಾದಚಾರಿ ಮಾರ್ಗ ದಲ್ಲಿ ನಡೆದು ಹೋಗಲು ಅವಕಾಶ ಇಲ್ಲದೆ ಓಡಾಡಲು ಕಷ್ಟಪಟ್ಟು ಸಾಗುತ್ತಿದ್ದರು. ಆದರೆ ಸಂಬಂಧ ಪಟ್ಟ ಬಿಬಿಎಂಪಿ ಇಲಾಖೆ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೆ ಇಲ್ಲ ಅನ್ನುವ ಹಾಗೇ ಇದ್ದಾರೆ ಎಂಬುದು ಸ್ಥಳೀಯರ ದೂರು! ಪಾದಚಾರಿ ಮಾರ್ಗ ದಲ್ಲಿ ಹೊಂಡ ಬಿದಿದ್ದು ಅದರಲ್ಲಿ ಕಸ, ಬಾಟಲಿ ಹಾಗೂ ಪೆಪೇಸಿ ಕುಡಿದು ಹಾಕಿದ್ದಾರೆ ನಗರದ ಮಹಾನ್ ಪ್ರಜೆಗಳು.
ಮುಂದಿನ ಚುನಾವಣಾ ತಯಾರಿಯಲ್ಲಿ ಬಿಬಿಎಂಪಿ- ರಾಜ್ಯ ಸರ್ಕಾರ?
ಪ್ರಾಯಶಃ ಮುಂಬರುವ ಬಿಬಿಎಂಪಿ ಚುನಾವಣಾ ತಯಾರಿಯಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ಬ್ಯುಸಿ ಆಗಿರಬಹುದು? ಹಾಗೂ ರಾಜ್ಯ ಸರ್ಕಾರ ಮುಂದಿನ ಚುನಾವಣೆಯ ಮತ ಲೆಕ್ಕ ಹಾಕುವುದರಲ್ಲಿ ಬ್ಯುಸಿ ಆಗಿರಬಹುದು, ಆದರೆ ಪಾದಚಾರಿ ಮಾರ್ಗವಿದ್ದರೂ ಪಾದಚಾರಿಗಳು ರಸ್ತೆಯ ಮಧ್ಯದಲ್ಲಿ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಆರ್ ಆರ್. ನಗರದಲ್ಲಿ. ಹೆಚ್ಚಿನ ವಾಹನ ದಟ್ಟಣೆ ಇರುವ ಈ ಸ್ಥಳದಲ್ಲಿ ಅಪಘಾತ ಸಂಭವಿಸುವ ಮುನ್ನ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಎಚ್ಚೆತುಕೊಳ್ಳಲಿ ಎಂದು ಆಶಿಸೋಣ ಅಲ್ಲವೇ? ಇದು ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯವೈಖರಿ ಎನ್ನೋಣವೇ? ರಾಜ್ಯ ಸರ್ಕಾರದ ಕಾರ್ಯವೈಖರಿ ಎನ್ನೋಣವೇ?
ಚಿತ್ರ- ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ, ಬೆಂಗಳೂರು
Post a Comment