ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗ್ರೆ ಉಪ ಆರೋಗ್ಯ ಕೇಂದ್ರ ಪುನರಾರಂಭ: ಶಾಸಕ ಕಾಮತ್ ಉದ್ಘಾಟನೆ

ಬೆಂಗ್ರೆ ಉಪ ಆರೋಗ್ಯ ಕೇಂದ್ರ ಪುನರಾರಂಭ: ಶಾಸಕ ಕಾಮತ್ ಉದ್ಘಾಟನೆಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗ್ರೆಯಲ್ಲಿ ಪುನರಾರಂಭಗೊಂಡ ಉಪ ಆರೋಗ್ಯ ಕೇಂದ್ರವನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. 


ಈ ಕುರಿತು ಮಾತನಾಡಿದ ಅವರು, ಬೆಂಗ್ರೆ ಭಾಗದ ಜನರ ಅನುಕೂಲಕ್ಕಾಗಿ ಈ ಹಿಂದೆ ನೀಡಿದ್ದ ಭರವಸೆಯಂತೆ ಉಪ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಎಂ.ಸಿ.ಎಫ್ ಸಂಸ್ಥೆಯ ಸಹಕಾರದೊಂದಿಗೆ ಆರೋಗ್ಯ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿದ್ದು ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ಮುಖ್ಯಸ್ಥರು ವೈದ್ಯರನ್ನು ನೇಮಕಗೊಳಿಸಲು ಜಿಲ್ಲಾಡಳಿತದೊಂದಿಗೆ ಬಹಳಷ್ಟು ಸಹಕಾರ ನೀಡಿದ್ದಾರೆ. ಆರೋಗ್ಯ ಕೇಂದ್ರಕ್ಕೆ ಸದ್ಯ ಮುಕ್ಕ ಶ್ರೀನಿವಾಸ್ ಆಸ್ಪತ್ರೆಯ ವೈದ್ಯರನ್ನು ನೇಮಿಸಲಾಗಿದೆ ಎಂದರು.


ತೋಟ ಬೆಂಗ್ರೆ, ಕಸಬಾ ಬೆಂಗ್ರೆ ಹಾಗೂ ಬೊಕ್ಕಪಟ್ಣ ಬೆಂಗ್ರೆ ಪರಿಸರದ ನಾಗರಿಕರು ಚಿಕಿತ್ಸೆಗಾಗಿ ನಗರಕ್ಕೆ ಬರಬೇಕಾಗಿತ್ತು. ಬೆಂಗ್ರೆಯಲ್ಲಿ ಆರೋಗ್ಯ ಕೇಂದ್ರ ಪುನರಾರಂಭಿಸುವುದರಿಂದ ನಾಗರಿಕರಿಗೆ ಪ್ರಾಥಮಿಕ ಚಿಕಿತ್ಸೆ ಪಡೆಯುವ‌ ಸೌಲಭ್ಯ ಒದಗಿಸಲಾಗಿದೆ. ಬೆಂಗ್ರೆ ಪರಿಸರದ ಸಾರ್ವಜನಿಕರು ನಗರವನ್ನೇ ಅವಲಂಬಿಸಿರುವುದರಿಂದ ಬೇಡಿಕೆಗಳನ್ನು ಇಲ್ಲಿಯೇ ಪೂರೈಸಲು ಪ್ರಯತ್ನಿಸಲಾಗುವುದು. ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿದ ಎಂ.ಸಿ.ಎಫ್ ಸಂಸ್ಥೆಯ ಪ್ರಮುಖರಿಗೆ ಹಾಗೂ ಶ್ರೀನಿವಾಸ್ ಆಸ್ಪತ್ರೆಯ ಪ್ರಮುಖರಿಗೆ ಧನ್ಯವಾದಗಳನ್ನು ಸಲ್ಲಿಸಿದರು.


ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಮಾತನಾಡಿ, ಬೆಂಗ್ರೆಯ ನಾಗರಿಕರು ಪ್ರತಿಯೊಂದು ವಿಚಾರಕ್ಕೂ ಸುತ್ತು ಬಳಸಿ ಬರಬೇಕಾಗಿರುವುದರಿಂದ ಇಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆ ಬಹಳಷ್ಟು ಉಪಯೋಗಕರವಾಗಿದೆ. ಈ ನಿಟ್ಟಿನಲ್ಲಿ ಶಾಸಕರ ಪ್ರಯತ್ನ ಶ್ಲಾಘನೀಯ ಎಂದರು.


ಕಾರ್ಯಕ್ರಮದಲ್ಲಿ ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷರಾದ ನಿತಿನ್ ಕುಮಾರ್, ಎಂ.ಸಿ.ಎಫ್ ಮೆಡಿಕಲ್ ಚೀಫ್ ಡಾ. ಯೋಗಿಶ್ ಭಟ್, ಪಿ.ಆರ್.ಒ ಅವಿನಂದ್, ಶ್ರೀನಿವಾಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಶ್ರೀನಿವಾಸ್ ರಾವ್, ಆರೋಗ್ಯಾಧಿಕಾರಿ ಕಿಶೋರ್ ಕೊಟ್ಟಾರಿ, ತಾಲೂಕು ಆರೋಗ್ಯಧಿಕಾರಿ ಸುಜಯ್ ಭಂಡಾರಿ, ಸ್ಥಳೀಯ ಕಾರ್ಪೋರೇಟರ್ ಬೆಂಗ್ರೆ, ಮಹಾಜನ ಸಭಾ ಉಪಾಧ್ಯಕ್ಷರಾದ ನರಸಿಂಹ, ಮಾಜಿ ಕಾರ್ಪೋರೇಟರ್ ಮೀರಾ ಕರ್ಕೇರ, ಮುಖಂಡರಾದ ಹೇಮಚಂದ್ರ, ಕಸಬಾ ಬೆಂಗ್ರೆ ಮಸೀದಿಯ ಅಧ್ಯಕ್ಷರಾದ ಬಿಲಾಲ್, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post