ಬರೇಲಿ; ಆ್ಯಂಬುಲೆನ್ಸ್ ಚಾಲಕ ನಿದ್ದೆಗೆ ಜಾರಿ ಅಪಘಾತ ಸಂಭವಿಸಿ ಅದರಲ್ಲಿದ್ದ ಏಳು ಮಂದಿ ಸಾವನ್ನಪ್ಪಿದ್ದಾರೆ.
ಈ ಅವಘಡ ಉತ್ತರ ಪ್ರದೇಶದ ಬರೇಲಿ ಬಳಿ ಇಂದು ಬೆಳಗ್ಗಿನ ವೇಳೆ ನಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ದೆಹಲಿಯ ಪಹರ್‌ಗಂಜ್‌ನಿಂದ ಪಿಲಿಭಿತ್‌ಗೆ ಹೋಗುತ್ತಿದ್ದ ಆಂಬ್ಯುಲೆನ್ಸ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಎದುರಿಗೆ ಬರುತ್ತಿದ್ದ ಮಿನಿಟ್ರಕ್‌ಗೂ ಗುದ್ದಿದೆ.
ಘಟನೆಯಲ್ಲಿ ರೋಗಿ ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಪಿಲಿಭಿತ್ ನಿವಾಸಿಗಳೆಂದು ಗುರುತಿಸಲಾಗಿದೆ.
ಫತೇಗಂಜ್ ಪಶ್ಚಿಮ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ, ಅವರೆಲ್ಲರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
Post a Comment