ಗುಂಡ್ಲುಪೇಟೆ(ಚಾಮರಾಜನಗರ): ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟಗೊಂಡು ಮನೆ ಛಿದ್ರ ಛಿದ್ರವಾಗಿ ಯುವಕನೊಬ್ಬ ಸುಟ್ಟು ಕರಕಲಾಗದ ಘಟನೆಯೊಂದು ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದ ಸ್ವಾಮಿ(29) ಮೃತಪಟ್ಟ ಯುವಕನಾಗಿದ್ದಾನೆ.
ಹಾಗೆ ರಾತ್ರಿ ಸಮಯದಲ್ಲಿ ಪೋಷಕರಿಲ್ಲದ ವೇಳೆ ಸ್ವಾಮಿ ಒಬ್ಬನೇ ಮನೆಯಲ್ಲಿದ್ದ ವೇಳೆ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದ್ದು, ಸ್ಪೋಟದ ತೀವ್ರತೆಗೆ ಸ್ವಾಮಿ ಸುಟ್ಟು ಕರಕಲಾಗಿದ್ದಾನೆ.
ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
إرسال تعليق