ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಲಿ ಆಟದಿಂದ ಸುಟ್ಟು ಹೋದ ಮನೆ; ಲಕ್ಷಾಂತರ ರೂ. ನಷ್ಟ

ಇಲಿ ಆಟದಿಂದ ಸುಟ್ಟು ಹೋದ ಮನೆ; ಲಕ್ಷಾಂತರ ರೂ. ನಷ್ಟ

  


ಅಹಮದಾಬಾದ್: ಎಲ್ಲಾ ಮನೆಗಳಲ್ಲಿ ಹೆಚ್ಚಾಗಿ ಇಲಿ ಇರುವುದು ಸಹಜ. ಹಾಗೆ ಗುಜರಾತ್​ನ ಅಹಮದಾಬಾದ್ ಬಳಿ ಕರ್ಮಭೂಮಿ ಸೊಸೈಟಿಯಲ್ಲಿರುವ ಉದ್ಯಮಿ ವಿನೋದ್ ಅವರ ಮನೆ ಬುಧವಾರ ಬೆಳಗ್ಗೆ ಇಲಿಯಿಂದ ಬೆಂಕಿಗೆ ಆಹುತಿಯಾಗಿದೆ.

ಬುಧವಾರ ಬೆಳಗ್ಗೆ ಮನೆಯ ದೇವರ ಕೋಣೆಯಲ್ಲಿ ಪೂಜೆ ಮಾಡಿ ದೀಪ ಹಚ್ಚಿದ್ದರು. ಆದರೆ ಆ ಬಳಿಕ ದೀಪದ ಬತ್ತಿಯನ್ನು ಇಲಿ ಎಳೆದುಕೊಂಡು ಮನೆ ತುಂಬಾ ಓಡಾಡಿದ್ದರಿಂದ ಬೆಂಕಿ ಹೊತ್ತಿ ಕೊಂಡಿದೆ.

ಬಳಿಕ ಬಟ್ಟೆಗಳಿಗೂ ಬೆಂಕಿ ತಗುಲಿ ಇಡೀ ಮನೆಗೆ ಜ್ವಾಲೆ ಆವರಿಸಿ, 2 ಲಕ್ಷ ನಗದು ಸೇರಿ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಹೋಗಿವೆ.

ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು.

ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾಗೂ 2 ಲಕ್ಷ ನಗದು ಸುಟ್ಟು ಹೋಗಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂಬ ಮಾಹಿತಿ ದೊರಕಿವೆ.


hit counter

0 Comments

Post a Comment

Post a Comment (0)

Previous Post Next Post