ಚೆನ್ನೈ: ತಮಿಳುನಾಡಿನ 18 ವರ್ಷದ ಟೇಬಲ್ ಟೆನ್ನಿಸ್ ಆಟಗಾರ ವಿಶ್ವ ದೀನದಯಾಳನ್ ಗುವಾಹಟಿಯಿಂದ ಶಿಲ್ಲಾಂಗ್‌ಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಸೋಮವಾರ ಶಿಲ್ಲಾಂಗ್‌ನಲ್ಲಿ ಆರಂಭವಾದ 83ನೇ ಸೀನಿಯರ್ ರಾಷ್ಟ್ರೀಯ ಮತ್ತು ಅಂತರ-ರಾಜ್ಯ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್‌ಗಾಗಿ ದೀನದಯಾಳನ್ ಅವರು ಗುವಾಹಟಿಯಿಂದ ಶಿಲ್ಲಾಂಗ್‌ಗೆ ಟ್ಯಾಕ್ಸಿಯಲ್ಲಿ ಇತರ ಮೂವರು ಸಹ ಆಟಗಾರರೊಂದಿಗೆ ಪ್ರಯಾಣಿಸುತ್ತಿದ್ದರು.
ಈ ವೇಳೆ ಎದುರಿನಿಂದ ಬರುತ್ತಿದ್ದ 12 ಚಕ್ರಗಳ ಟ್ರೈಲರ್ ಶಾಂಗ್ಬಾಂಗ್ಲಾ ಚೆಕ್ ಪೋಸ್ಟ್ ಬಳಿ ರಸ್ತೆ ವಿಭಜಕಕ್ಕೆ ತಗುಲಿ ನಿಯಂತ್ರಣ ತಪ್ಪಿ ಟ್ಯಾಕ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಟ್ಯಾಕ್ಸಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದೀನದಯಾಳನ್ ಅವರನ್ನು ನಾರ್ತ್ ಈಸ್ಟರ್ನ್ ಇಂದಿರಾ ಗಾಂಧಿ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಮೆಡಿಕಲ್ ಸೈನ್ಸ್ಗೆ ಕರೆದೊಯ್ಯಲಾಯಿತು. ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment