ಬಂಟ್ವಾಳ: ಕರೆಂಟ್ ಶಾಕ್ ಹೊಡೆದು ಮಹಿಳೆ ಮೃತಪಟ್ಟ ಘಟನೆಯೊಂದು ಗುರುವಾರ ಸಂಜೆ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಡಬೆಟ್ಟುನಲ್ಲಿ ನಡೆದಿದೆ.
ಕಾಡುಬೆಟ್ಟು ಕ್ರಾಸ್ ನಿವಾಸಿ ಮಂಜುನಾಥ ಅವರ ಪತ್ನಿ ಭಾಗೀರಥಿ ಮೃತಪಟ್ಟ ಮಹಿಳೆ.
28ರಂದು ಸಂಜೆ ಸುಮಾರು 6.30ಕ್ಕೆ ಭಾಗೀರಥಿ ಮನೆಯಂಗಳದಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್‌ಐ ಹರೀಶ್, ಮಹಿಳಾ ಪಿಎಸ್‌ಐ ಭಾರತಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Post a Comment