ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುಟ್ಬಾಲ್ ಆಟಗಾರ ರೊನಾಲ್ಡೊ ಅವರ ಮಗು ಮೃತ್ಯು

ಪುಟ್ಬಾಲ್ ಆಟಗಾರ ರೊನಾಲ್ಡೊ ಅವರ ಮಗು ಮೃತ್ಯು

 


ಇಂಗ್ಲೆಂಡ್: ಪ್ರಸಿದ್ಧ ಪೋರ್ಚುಗೀಸ್‌ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ನವಜಾತ ಅವಳಿ ಮಕ್ಕಳಲ್ಲಿ ಒಂದು ಮಗು ಮೃತಪಟ್ಟಿರುವ ಮಾಹಿತಿ ತಿಳಿದಿದೆ.

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ರೊನಾಲ್ಡೊ ವಿಷಯ ತಿಳಿಸಿದ್ದಾರೆ. ರೊನಾಲ್ಡೋ ಪತ್ನಿ ಜಾರ್ಜಿನಾ ರೊಡ್ರಿಗಸ್ ಮತ್ತು ತಮ್ಮ ಸಹಿ ಇರುವ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಅವಳಿ ಮಕ್ಕಳಲ್ಲಿ ಗಂಡು ಮಗು ತೀರಿಕೊಂಡಿದೆ ಎಂದು ಹೇಳಲು ತುಂಬಾ ದುಃಖವಾಗಿದೆ. ಯಾವುದೇ ಪೋಷಕರು ಅನುಭವಿಸಬಹುದಾದ ದೊಡ್ಡ ನೋವು ಇದು'' ಎಂದು ಪೋಸ್ಟ್‌ ಹಾಕಿ ಅವರು ನೋವನ್ನು ಹಂಚಿಕೊಂಡಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post