ಮಹಾರಾಷ್ಟ್ರ: ಮಗು ಜನಿಸಿದ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಈ ವೇಳೆ ಎಲ್ಲರಿಗೂ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸುತ್ತಾರೆ. ಆದರೆ ಇಲ್ಲೊಂದು ಕುಟುಂಬ ಹೆಲಿಕಾಪ್ಟರ್ ಮೂಲಕ ಮಗುವನ್ನು ಮನೆಗೆ ಕರೆತಂದಿದ್ದಾರೆ.
ರಾಜಲಕ್ಷ್ಮಿ ಎಂಬ ಹೆಣ್ಣು ಮಗು ಜನವರಿ 22 ರಂದು ಭೋಸಾರಿಯಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಜನಿಸಿದಳು.
ಮಗುವನ್ನು ಖೇಡ್‌ನ ಶೆಲ್ಗಾಂವ್‌ನಲ್ಲಿರುವ ತನ್ನ ಮನೆಗೆ ಕರೆದೊಯ್ಯಲು ಕುಟುಂಬವು ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ತೆಗೆದುಕೊಂಡು, ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿಸುವ ಮೂಲಕ ಮನೆಗೆ ಕರೆತಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಗುವಿನ ತಂದೆ ವಿಶಾಲ್ ಜರೇಕರ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಬಹಳ ದಿನಗಳ ನಂತರ ನಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದು ಸಂತಸ ತಂದಿದೆ ಎಂದು ವಿಶಾಲ್ ಹೇಳಿದ್ದಾರೆ.
ನಾನು, ನನ್ನ ಪತ್ನಿ ಮತ್ತು ಮಗಳು ರಾಜಲಕ್ಷ್ಮಿಯನ್ನು ಏಪ್ರಿಲ್ 2ರಂದು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದಿದ್ದೇನೆ.
ಇದಕ್ಕಾಗಿ 1 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಹೆಲಿಕಾಪ್ಟರ್ ಶೆಲ್ಗಾಂವ್‌ನಲ್ಲಿರುವ ಅವರ ಜಮೀನಿನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಇಳಿಯಿತು ಎಂದು ಜರೇಕರ್ ಹೇಳಿದರು.
إرسال تعليق