ಸುಳ್ಯ: ಇಲ್ಲಿನ ಸುಳ್ಯ ಮೂಲದ ದಂಪತಿಗಳು ಮೈಸೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಡೆದಿದೆ. ಸುಳ್ಯದ ಕುಕ್ಕಾಜೆಕಾನದವರಾದ ದಂಪತಿ ಮಾಧವ ನಾಯ್ಕ್ (56) ಮತ್ತು ಅವರ ಪತ್ನಿ ಉಷಾ ಎಂದು ಗುರುತಿಸಲಾಗಿದೆ.
ಸುಳ್ಯ ಕುಕ್ಕಾಜೆಕಾನದ ಮಾಧವ ನಾಯ್ಕ್ ರವರು 3 ವರ್ಷಗಳ ಹಿಂದೆ ಪತ್ನಿ, ಪುತ್ರಿ ಸಮೇತ ಮೈಸೂರಿಗೆ ಹೋಗಿ ಅಲ್ಲಿ ನೆಲೆಸಿದ್ದು, ಕಳೆದ ವರ್ಷ ಪುತ್ರಿಯ ಮದುವೆ ಕೂಡ ಮಾಡಿಸಿದ್ದು, ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಮೈಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮಹಜರು ನಡೆದು ಮೃತದೇಹಗಳನ್ನು ಎ.17 ರಂದು ರಾತ್ರಿ ಸುಳ್ಯ ಕುಕ್ಕಾಜೆಕಾನಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment