ಖರಗಾಂವ್ (ಮಧ್ಯಪ್ರದೇಶ): ರಾಮನವಮಿ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಹಲವು ಪ್ರಕರಣಗಳು ಮಧ್ಯಪ್ರದೇಶದ ಕೆಲವೆಡೆಗಳಿಂದ ವರದಿಯಾಗಿದೆ. ಬರ್ವಾನಿ ಮತ್ತು ಸೆಂಧ್ವಾದಲ್ಲಿಯೂ ರಾಮನವಮಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಯುವತಿಯೊಬ್ಬಳು ಮೇಲ್ಛಾವಣಿಯ ಮೇಲೆ ನಿಂತು ಕಲ್ಲು ಎಸೆಯುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.
ಈ ವೀಡಿಯೋ ದೃಶ್ಯಾವಳಿ ಆಧರಿಸಿ ಮಂಗಳವಾರ ಪೊಲೀಸರು ಆ ಪ್ರದೇಶದಲ್ಲಿದ್ದ 3 ಮನೆಗಳ ಮೇಲೆ ಕ್ರಮ ಕೈಗೊಂಡು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದ್ದಾರೆ.
ಎಲ್ಲೆಲ್ಲಿ ಕಲ್ಲುಗಳನ್ನು ಎಸೆಯಲಾಗಿದೆಯೋ ಆ ಮನೆಗಳನ್ನು ಕೆಡವಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಫೋಟೋದಲ್ಲಿ ಕಾಣುವ ಹುಡುಗಿಯ ಹೆಸರು ಸಬಾ ಎನ್ನಲಾಗಿದೆ. ಈಕೆ ಮದನಿ ಚೌಕ್‌ನಲ್ಲಿರುವ ತನ್ನ ಮನೆಯಿಂದ ಕಲ್ಲು ಎಸೆಯುತ್ತಿದ್ದಳು ಎನ್ನಲಾಗಿದೆ.
ಈ ಪ್ರದೇಶದಲ್ಲಿ ಪೊಲೀಸರು ಕ್ರಮ ಕೈಗೊಂಡಿರುವ ಮೂರು ಮನೆಗಳು ನಾಸಿರ್, ಅಸ್ಗರ್ ಮತ್ತು ಬಾಬರ್ ಎಂಬ ವ್ಯಕ್ತಿಗಳಿಗೆ ಸೇರಿದವು ಎನ್ನಲಾಗಿದೆ.
ಇದುವರೆಗೆ ಒಟ್ಟು 11 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. 25 ರಿಂದ 30 ಮಂದಿಯನ್ನು ಗುರುತಿಸಲಾಗಿದ್ದು, ಈ ಜೊತೆಗೆ 10 ರಿಂದ 12 ಮಂದಿಯನ್ನು ಬಂಧಿಸಲಾಗಿದೆ.
ದುಷ್ಕರ್ಮಿಗಳ ದೂರು ದಾಖಲಿಸಿಕೊಂಡು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق