ಮಂಗಳೂರು: ಎಪ್ರಿಲ್ 24ರ ಭಾನುವಾರದಂದು ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ತಜ್ಞ, ಮಿಶ್ರ ಪದ್ಧತಿ ವೈದ್ಯ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರಿಗೆ ಸಾಹಿತ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇವರ ವೈದ್ಯಕೀಯ ಸೇವೆ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ ಚಿತ್ರದುರ್ಗದ ಕರುನಾಡ ಹಣತೆ (ರಿ) ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲಾ ಸಂಘವು ಈ ಪ್ರಶಸ್ತಿಯನ್ನು ನೀಡುತ್ತಿದೆ.
ಸಂಸ್ಥೆ ಯ ತೃತೀಯ ವಾರ್ಷಿಕೋತ್ಸವ, ಮಹಿಳಾ ಘಟಕದ ಉದ್ಘಾಟನೆ, ಕವಿಗೋಷ್ಠಿ- ಮತ್ತು ಸಾಧಕ ಸನ್ಮಾನಗಳು ಈ ಸಂದರ್ಭದಲ್ಲಿ ನಡೆಯಲಿವೆ.
ಸ್ಥಾಪಕಾಧ್ಯಕ್ಷ ಕನಕ ಪ್ರೀತೀಶ್ ಕಲಮರ ಹಳ್ಳಿ ಹಾಗೂ ರಾಜ್ಯಾಧ್ಯಕ್ಷ ಎಸ್ ರಾಜು ಸೂಲೇನ ಹಳ್ಳಿ ಇವರ ಸಾರಥ್ಯದಲ್ಲಿ ಶ್ರೀಮತಿ ಜ್ಯೋತಿ ಬಾದಾಮಿ ಇವರ ಅಧ್ಯಕ್ಷತೆಯಲ್ಲಿ ಚಿತ್ರದುರ್ಗದ ತ.ರಾ.ಸು ರಂಗ ಮಂದಿರದಲ್ಲಿ ಈ ಸಮಾರಂಭವು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment