ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೌಗಂಧಿಕ’ದಲ್ಲಿ ಮಕ್ಕಳಿಗಾಗಿ ವಿಶೇಷ ಶಿಬಿರ

ಸೌಗಂಧಿಕ’ದಲ್ಲಿ ಮಕ್ಕಳಿಗಾಗಿ ವಿಶೇಷ ಶಿಬಿರ


ಪುತ್ತೂರು: ಪರ್ಪುಂಜದ ‘ಸೌಗಂಧಿಕ’ ಆವರಣದಲ್ಲಿ ಮೇ 1ರಿಂದ 10ರ ವರೆಗೆ ಮಕ್ಕಳಿಗಾಗಿ ವಿಶೇಷ ಶಿಬಿರ– ‘ಸಂವರ್ಧನ’ ಹಮ್ಮಿಕೊಳ್ಳಲಾಗಿದೆ.    


ಸಸ್ಯ ಸಂವರ್ಧನೆ, ಕರಕುಶಲ ತಯಾರಿ, ಮಕ್ಕಳ ರಂಗಭೂಮಿ, ಮುಖವಾಡಗಳ ರಚನೆ, ಪ್ರಕೃತಿ ಪರಿಚಯ, ಚಿತ್ರಕಲೆ, ಪಕ್ಷಿ ವೀಕ್ಷಣೆ  ಹೀಗೆ ಹಲವು ಕುತೂಹಲಕಾರಿ ವಿಚಾರಗಳ ಬಗ್ಗೆ ಆಯಾ ಕ್ಷೇತ್ರದ ಪರಿಣತರು ಮಾಹಿತಿ-ಮಾರ್ಗದರ್ಶನ ನೀಡಲಿದ್ದಾರೆ.


ಶಿಬಿರ ಗಿಡಮರಗಳ ನಡುವಿನ ತಾಣದಲ್ಲಿ ಪ್ರತಿ ದಿನ ಬೆಳಿಗ್ಗೆ 9ರಿಂದ ಸಂಜೆ 5ರ ವರೆಗೆ ನಡೆಯಲಿದ್ದು ಕೊನೆಯಲ್ಲಿ ಮಕ್ಕಳು ನಾಟಕವೊಂದನ್ನು ಸಾದರಪಡಿಸಲಿದ್ದಾರೆ. ‘ಸೌಗಂಧಿಕ’ದಲ್ಲಿರುವ ಸಸ್ಯವೈವಿಧ್ಯ, ನಾನಾ ಬಗೆಯ ವಾಟರ್ ಲಿಲ್ಲಿಗಳು, ಹಕ್ಕಿ ಗೂಡು, ಮುಜಂಟಿ ಜೇನುಕುಟುಂಬಗಳು ಇವೆಲ್ಲ ಶಿಬಿರಾರ್ಥಿಗಳಿಗೆ ಅನನ್ಯ ಅನುಭವವನ್ನು ತಂದುಕೊಡಲಿವೆ.


ವಿವರಗಳಿಗಾಗಿ ಸಂಪರ್ಕ– ಚಂದ್ರ ಸೌಗಂಧಿಕ 9900409380, 9448012066


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post