ನವದೆಹಲಿ: ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ.
ಕಳೆದ 16 ದಿನಗಳಲ್ಲಿ ಲೀಟರ್‌ಗೆ 10 ರೂ. ಏರಿಕೆಯಾಗಿದೆ. ದೆಹಲಿಯಲ್ಲಿ ಸದ್ಯ ಪೆಟ್ರೋಲ್ ಬೆಲೆ ಲೀಟರ್‌ಗೆ ನಿನ್ನೆ 104.61 ರೂ. ಇದ್ದು, ಇಂದು 105.41 ರೂ.ಗೆ ಏರಿಕೆಯಾಗಿದೆ. ಹಾಗೆಯೇ ಡೀಸೆಲ್ ಲೀಟರ್‌ಗೆ 95.87 ರೂ. ನಿಂದ 96.67 ರೂ.ಗೆ ಏರಿಕೆಯಾಗಿದೆ.
ಮುಂಬೈನಲ್ಲಿ ಪೆಟ್ರೋಲ್ 120.51 ರೂ., ಡೀಸೆಲ್ 104.77 ರೂ., ಚೆನ್ನೈನಲ್ಲಿ ಪೆಟ್ರೋಲ್ 110.86 ರೂ., ಡೀಸೆಲ್ 100.95 ರೂ., ಕೋಲ್ಕತ್ತಾದಲ್ಲಿ ಪೆಟ್ರೋಲ್ 115.12 ರೂ., ಡೀಸೆಲ್ 99.83 ರೂ. ಹಾಗೂ ಬೆಂಗಳೂರಿನಲ್ಲಿ ಪೆಟ್ರೋಲ್ 111.09 ರೂ., ಡೀಸೆಲ್ 94.79 ರೂ. ರೂಪಾಯಿ ಇದೆ.
إرسال تعليق