ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಒಂದೇ ಪಪ್ಪಾಯಿ ಮರದಲ್ಲಿ 15 ಕೊಂಬೆಗಳು, 200 ಹಣ್ಣುಗಳು!

ಒಂದೇ ಪಪ್ಪಾಯಿ ಮರದಲ್ಲಿ 15 ಕೊಂಬೆಗಳು, 200 ಹಣ್ಣುಗಳು!

ಆಂಧ್ರಪ್ರದೇಶ:ಪಶ್ಚಿಮ ಗೋದಾವರಿ ಜಿಲ್ಲೆಯ ಪೆರವಲಿ ಮಂಡಲದ ಖಂಡವಳ್ಳಿ ಮತ್ತು ಅನ್ನಾವರಪ್ಪಡು ನಡುವಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅಪರೂಪದ ಪಪ್ಪಾಯ ಮರವಿದ್ದು, ಸುಮಾರು 200 ಹಣ್ಣುಗಳು ಈ ಒಂದೇ ಮರದಲ್ಲಿದೆ.

ಈ ಮರ ಇಷ್ಟೊಂದು ಹಣ್ಣುಗಳನ್ನು ಬಿಡಲು ಕಾರಣ ಅದಕ್ಕಿರುವ ಕೊಂಬೆಗಳು, ಸುಮಾರು 15 ಕೊಂಬೆಗಳು ಈ ಮರಕ್ಕಿದ್ದು, ಎಲ್ಲಾ ಕೊಂಬೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ್ಣುಗಳಿವೆ. ಖಂಡವಳ್ಳಿ ಗ್ರಾಮದ ರೈತರ ಕೃಷಿ ಭೂಮಿಯ ಗಡಿಯಲ್ಲಿ ಈ ಮರವಿದ್ದು, ಯಾವುದೇ ಗೊಬ್ಬರವನ್ನು ಈ ಮರಕ್ಕೆ ನೀಡಿಲ್ಲ ಎಂಬುದು ಅಚ್ಚರಿಯ ವಿಷಯವಾಗಿದೆ.


ತೋಟಗಾರಿಕಾ ಅಧಿಕಾರಿಗಳ ಪ್ರಕಾರ, ಪಪ್ಪಾಯಿ ಮರವು ಆನುವಂಶಿಕ ಅಂಶಗಳಿಂದ ಹೆಚ್ಚು ಹಣ್ಣುಗಳನ್ನು ಬಿಡುವ ಸಾಧ್ಯತೆ ಇದೆ ಎಂದಿದ್ದಾರೆ. ಪಪ್ಪಾಯಿ ಮರದ ಪಕ್ಕವೇ ರೈತರು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದು, ತರಕಾರಿಗೆ ಒದಗಿಸಲಾದ ಪೋಷಕಾಂಶಗಳನ್ನೇ ಪಪ್ಪಾಯಿ ಮರ ಹೀರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. 


hit counter

0 Comments

Post a Comment

Post a Comment (0)

Previous Post Next Post