ಭದ್ರಾವತಿ: ಹಲಾಲ್ ಮಾಂಸ ಖರೀದಿಸದಂತೆ ಮುಸ್ಲಿಮರ ಅಂಗಡಿಗಳ ಮುಂದೆ ಅಪಪ್ರಚಾರ ನಡೆಸಿದ್ದಲ್ಲದೇ, ಹಲ್ಲೆ ನಡೆಸಿದ ಆರೋಪದಡಿ ಭದ್ರಾವತಿ ಹಳೇ ನಗರ ಪೊಲೀಸರು ಭಜರಂಗದಳ 7 ಕಾರ್ಯಕರ್ತರನ್ನು ಬಂಧಿಸಿ, ಎಲ್ಲರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಬಿ.ಎಚ್ ರಸ್ತೆಯ ಖಾಸಗಿ ಹೋಟೆಲ್ ಬಳಿ, 'ಹಲಾಲ್ ಹೆಸರಿನಲ್ಲಿ ನಡೆಯುವ ಆಹಾರ ಸೇವಿಸಬೇಡಿ' ಎಂದು ಬುಧವಾರ ಪ್ರಚಾರ ನಡೆಸಿದ್ದರು.
ಆದರೆ ಹಲ್ಲೆ ನಡೆದಿಲ್ಲ, ಎಲ್ಲರನ್ನೂ ಬಂಧಿಸಿ, ಬಿಡುಗಡೆ ಮಾಡಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಹೇಳಿದರು.
Post a Comment