ವ್ಯಕ್ತಿಯೊಬ್ಬರು ತಮ್ಮ ಹೊಲವನ್ನು ರಕ್ಷಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ತೆಲಂಗಾಣದ ರೈತ ಭಾಸ್ಕರ್ ರೆಡ್ಡಿ ತನ್ನ ಬೆಳೆಗಳನ್ನು ರಕ್ಷಿಸಲು ಸ್ವತಃ ತಾವೇ ಕರಡಿಯಂತೆ ವೇಷ ಧರಿಸಿ ಸುದ್ದಿಯಾಗಿದ್ದಾರೆ.
ತೆಲಂಗಾಣದ ಸಿದ್ದಿಪೇಟ್‌ನಲ್ಲಿ ಅವರು ಬೆಳೆಗಳನ್ನು ಕೊಯ್ಲು ಮಾಡುವ ಮುನ್ನ ಕಾಡು ಹಂದಿಗಳು ಮತ್ತು ಮಂಗಗಳು ಬಂದು ನಾಶ ಮಾಡಿಬಿಡುತ್ತಿದ್ದವು. ಹೀಗಾಗಿ ರೆಡ್ಡಿ ಈ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ.
ರೆಡ್ಡಿ ಮತ್ತು ಅವರ ಮಗ ಹೊಲಗಳಿಗೆ ತೆರಳುವಾಗ ಕರಡಿ ವೇಷಭೂಷಣವನ್ನು ಧರಿಸಿ ಹೋಗುತ್ತಾರೆ. ಇದೀಗ ಇದಕ್ಕಾಗಿ ವ್ಯಕ್ತಿಯೊಬ್ಬನನ್ನು ನೇಮಿಸಲಾಗಿದೆ. ಆತನಿಗೆ ಪ್ರತಿದಿನಕ್ಕೆ 500 ರೂ. ಮೊತ್ತ ನಿಗದಿಪಡಿಸಲಾಗಿದೆ. ಇದರಿಂದ ಪ್ರಾಣಿಗಳ ಉಪಟಳ ಕಡಿಮೆಯಾಗಿದೆಯಂತೆ.
إرسال تعليق