ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊಡಿಯಾಲಗುತ್ತು: ಒಳಚರಂಡಿ ಕೊಳವೆ ಬದಲಾವಣೆ ಕಾಮಗಾರಿ ಶಾಸಕ ವೇದವ್ಯಾಸ ಕಾಮತ್ ಚಾಲನೆ

ಕೊಡಿಯಾಲಗುತ್ತು: ಒಳಚರಂಡಿ ಕೊಳವೆ ಬದಲಾವಣೆ ಕಾಮಗಾರಿ ಶಾಸಕ ವೇದವ್ಯಾಸ ಕಾಮತ್ ಚಾಲನೆ


ಮಂಗಳೂರು: ಮಹಾನಗರ ಪಾಲಿಕೆಯ ಕೊಡಿಯಾಲ್ ಬೈಲ್ ವಾರ್ಡಿನ ಕೊಡಿಯಾಲಗುತ್ತು ರಸ್ತೆಯಲ್ಲಿ ಒಳಚರಂಡಿ ಕೊಳವೆಗಳ ಬದಲಾವಣೆಗೆ 1.25 ಕೋಟಿ ಬಿಡುಗಡೆಗೊಳಿಸಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.


ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಕೊಡಿಯಾಲ್`ಗುತ್ತು ರಸ್ತೆಯ ಹಾಲಿ ಇರುವ ಒಳಚರಂಡಿ ವ್ಯವಸ್ಥೆಯ ಕೊಳವೆಗಳು 50 ರಿಂದ 60 ವರ್ಷ ಹಳೆಯದಾಗಿದ್ದು ಶಿಥಿಲಾವಸ್ಥೆ ತಲುಪಿದೆ. ಈ ಕೊಳವೆಗಳಲ್ಲಿ ತ್ಯಾಜ್ಯ ಸರಿಯಾಗಿ ಹರಿಯದೆ ರಸ್ತೆಯ ಬದಿಗಳಲ್ಲಿ ಕೊಳಚೆ ನೀರು ಹರಿದು ಸಾಕಷ್ಟು ಸಮಸ್ಯೆಯಾಗುತ್ತಿದೆ. ಆ ನಿಟ್ಟಿನಲ್ಲಿ ಕೊಳವೆಗಳ ಬದಲಾವಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ. 


ಕ್ವಿಮಿಪ್ ಯೋಜನೆಯಡಿ ರಾಜ್ಯ ಸರಕಾರದ 1.25 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ರಸ್ತೆಯಲ್ಲಿ 400 ಮಿ.ಮೀ ವ್ಯಾಸದ ಆರ್.ಸಿ.ಸಿ ಕೊಳವೆ ಅಳವಡಿಸುವುದು, ಆರ್.ಸಿ.ಸಿ ಮ್ಯಾನ್ ಹೋಲ್ ನಿರ್ಮಾಣ, ಎಲ್ಲಾ ಮನೆಯ ಸಂಪರ್ಕಗಳನ್ನು ಹೊಸ ಕೊಳವೆಗೆ ಜೋಡಿಸುವುದು, ಅಡ್ಡರಸ್ತೆಗಳ ಹಳೆಯ ಕೊಳವೆಗಳ ಬದಲಾವಣೆ, ಕಾಂಕ್ರೀಟ್ ರಸ್ತೆಯ ಮರು ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯಲಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.


ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೋರೆಟರ್ ಹಾಗೂ ಪಾಲಿಕೆ ಮುಖ್ಯಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಮುಖಂಡರಾದ ಪ್ರಶಾಂತ್ ಆಳ್ವ, ವಿವೇಕ್ ದೇವಾಡಿಗ, ಹೇಮಂನಂದ್, ಶೇಖರ್ ಶೆಟ್ಟಿ, ಜಯರಾಜ್ ಶೆಟ್ಟಿ, ಯಶವಂತ ಕುದ್ರೋಳಿ, ಅಜಯ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಗಂಗಾಧರ್, ಸದಾಶಿವ ಬಿಜೈ, ಗಣೇಶ್ ಶೆಟ್ಟಿ, ಶಶಾಂಕ್, ಚಿಂತನ್, ಮನಿರಾಜ್ ಶೆಟ್ಟಿ, ಮೋಹನ್ ಕಿಣಿ, ರವೀಂದ್ರನಾಥ ಶೆಟ್ಟಿ, ಸುಧಾಕರ್ ಶೆಟ್ಟಿ, ರಘುವೀರ್ ಆಳ್ವ, ಪ್ರವೀಣ್ ರೈ, ಜಗದೀಶ್ ಭಟ್, ಮೈನಕ್ಕ, ಶೋಭಾ ಆಳ್ವ, ಜ್ಯೋತಿ ಶೆಟ್ಟಿ, ಆನಂದ ಶೆಟ್ಟಿ,  ದೀಪಕ್ ಡಿಕುನ್ನಾ, ನಂದನ್ ಮಲ್ಯ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post