ರಾಷ್ಟ್ರ ಮಟ್ಟದಲ್ಲಿ ವ್ಯವಹರಿಸುವಾಗ ಆದಷ್ಟು ಮಟ್ಟಿಗೆ ಹಿಂದಿಯಲ್ಲಿಯೇ ವ್ಯವಹರಿಸಿ ಅನ್ನುವ ಹೇಳಿಕೆಯನ್ನು ಅಮಿತ್ ಶಾ ನೀಡಿದ್ದರು. ಇದರಲ್ಲಿ ಯಾವ ತಪ್ಪು ಇಲ್ಲ. ಯಾಕೆಂದರೆ ನನಗೆ ಹಿಂದಿ ಬರುವುದಿಲ್ಲ ಅಂದ ಮಾತ್ರಕ್ಕೆ ನಾನು ಹಿಂದಿಯನ್ನು ವಿರೇೂಧಿಸುವುದು ತಪ್ಪು.
ಅಮಿತ್ ಶಾ ರವರ ಈ ಹೇಳಿಕೆಯನ್ನು ಭಾಷೆಯೇ ಬಾರದ ಸಿದ್ಧರಾಮಯ್ಯನಂತವರು ಇದನ್ನು "ಸಾಂಸ್ಕೃತಿಕ ಭಯೇೂತ್ಪಾದನೆ ಅನ್ನುವ ಮಟ್ಟಿಗೆ ರಾಷ್ಟ್ರ ವಿರೇೂಧಿ ಹೇಳಿಕೆಯನ್ನು ನೀಡಿ ಕಾಂಗ್ರೆಸ್ ಪಕ್ಷ ಇನ್ನು ಪ್ರಾದೇಶಿಕ ಪಕ್ಷ ಅನ್ನುವುದನ್ನು ಜಾಹೀರುಗೊಳಿಸಿಬಿಟ್ಟಿದ್ದಾರೆ.
ಕರ್ನಾಟಕದಲ್ಲಿ ಇನ್ನು ಕಾಂಗ್ರೆಸ್ ಉಳಿಯ ಬೇಕಾದರೆ ಈ ಪ್ರಾದೇಶಿಕ ಮನಃಸ್ಥಿತಿ ಬೆಳೆಸಿಕೊಳ್ಳಲೇ ಬೇಕಾದ ಪರಿಸ್ಥಿತಿ ಬಂದಿದೆ ಅನ್ನುವುದು ಅವರ ಮಾತಿನಿಂದ ಸ್ವಷ್ಟವಾಗಿದೆ. ಆದರೆ ಜೆಡಿಎಸ್ ನವರು ಪ್ರಾದೇಶಿಕತೆಯನ್ನು ಬೆಂಬಲಿಸುವುದು ಅವರ ಧರ್ಮ. ಯಾಕೆಂದರೆ ಅವರ ಉಸಿರಾಟವಿರುವುದು ರಾಷ್ಟ್ರೀಯ ಧೇೂರಣೆಯ ಮೇಲೆ ಅಲ್ಲ. ಸಿದ್ಧರಾಮಯ್ಯ ಮತ್ತು ಜೆಡಿಎಸ್ ನವರು ಇನ್ನೊಂದು ಸತ್ಯ ಸಂಗತಿ ಅರ್ಥ ಮಾಡಿಕೊಳ್ಳಬೇಕು. ಅವರ 20% ಜಾತ್ಯತೀತ ಮತಗಳು ಶಾಲಾ ಕಾಲೇಜಿನಲ್ಲಿ ಆಯ್ಕೆ ಮಾಡಿಕೊಳ್ಳುವುದು ಹಿಂದಿಯೇ ಹೊರತು ನಮ್ಮ ಕನ್ನಡ ಭಾಷೆ ಅಲ್ಲ. ಹಾಗಾಗಿ ಹಿಂದಿ ವಿರೇೂಧಿಸಿ ಹೇಳಿಕೆಯನ್ನು ನೀಡುವಾಗ ಮತಗಳ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡುವುದು ಉತ್ತಮ.
ಈ ದೇಶವನ್ನು ಭಾಷಾ ನೆಲೆಯಲ್ಲಿ ಒಂದುಗೂಡಿಸುವುದಿದ್ದರೆ ಅದು ಹಿಂದಿ ಭಾಷೆಯಿಂದ ಮಾತ್ರ ಸಾಧ್ಯ. ಅಂದರೆ ಈ ದೇಶದಲ್ಲಿ ಹಿಂದಿ ಭಾಷಾ ಮಾತನಾಡುವವರ ಸಂಖ್ಯೆ ಇಂಗ್ಲೀಷ್ ಭಾಷೆ ಮಾತನಾಡುವರ ಸಂಖ್ಯಾ ಪ್ರಮಾಣ ಎಷ್ಟು ಅನ್ನುವ ಅಂಕಿ ಅಂಶ ಗೊತ್ತಿದ್ದವರು. ರಾಷ್ಟ್ರ ಮಟ್ಟದಲ್ಲಿ ಹಿಂದಿ ಬಳಕೆಯನ್ನು ವಿರೇೂಧಿಸಲು ಸಾಧ್ಯನೇ ಇಲ್ಲ. ಹಿಂದಿ ವಿರೇೂಧಿಸುತ್ತೇನೆ ಅಂದರೆ ಅದರ ಅರ್ಥ ಇಂಗ್ಲೀಷ್ ಭಾಷೆ ಬಳಸಿ ಅನ್ನುವ ಸೂಚ್ಯಾರ್ಥವೇ ಆಗಿರುತ್ತದೆ.
ಸಿದ್ಧರಾಮಯ್ಯ ನವರು ಶುದ್ಧ ಕನ್ನಡದಲ್ಲಿ ಮಾತನಾಡಿದ್ದು ಒಮ್ಮೆಯೂ ನಾನು ಕೇಳಲಿಲ್ಲ; ಮಧ್ಯದಲ್ಲಿ ಸಾಕಷ್ಟು ತಮಗೆ ಬರುವ ಇಂಗ್ಲೀಷ್ ಪದಗಳನ್ನೆ ಬಳಸಿ ತಾನು ಕನ್ನಡ ಪ್ರೇಮಿ ಅನ್ನುವುದನ್ನು ಬಿಂಬಿಸಲು ಪ್ರಯತ್ನಿಸುತ್ತಿರುವುದನ್ನು ನಾವೆಲ್ಲರೂ ನೇೂಡಿದ್ದೇವೆ. ಹಾಗಾಗಿ ಇಂಗ್ಲೀಷ್ ಮಾತನಾಡುವ ಹೈಕಮಾಂಡ್ ಮೆಚ್ಚಿಸಲು ಈ ಹೇಳಿಕೆ ನೀಡಿದ್ದಾರೇೂ ಅನ್ನುವ ಸಂಶಯ ಬರುತ್ತಿದೆ.
ಇಂದಿನ ಪರಿಸ್ಥಿತಿಯಲ್ಲಿ ಆಯಾಯ ಪ್ರಾದೇಶಿಕ ಭಾಷೆಗಳನ್ನು ಪ್ರೀತಿಸಿ ಗೌರವಿಸುವುದರ ಜೊತೆಗೆ ಸಾಧ್ಯವಾದ ಮಟ್ಟಿಗೆ ರಾಷ್ಟ್ರ ಬಹು ಸಂಖ್ಯಾತರು ಮಾತನಾಡುವ ಹಿಂದಿ ಭಾಷೆಯನ್ನು ಪ್ರೀತಿಸಿ ಗೌರವಿಸುವುದು ಕೂಡಾ ನಮ್ಮ ಕತ೯ವ್ಯವಾಗ ಬೇಕು. ಇದು ರಾಷ್ಟ್ರವನ್ನು ಒಂದಾಗಿಸುವ ಭಾಷಾ ಸಂಸ್ಕೃತಿಯ ಪ್ರತಿಬಿಂಬವೂ ಹೌದು.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
Super Surendranathji. धन्यवाद
ReplyDeletePost a Comment