ಚಿಕ್ಕೋಡಿ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ಅನಾಹುತಗಳಾಗಿದ್ದು, ಚಿಕ್ಕೋಡಿ ಉಪವಿಭಾಗದಲ್ಲಿ ಉಂಟಾದ ಅಕಾಲಿಕ ಮಳೆಯಿಂದ ಒಣ ದ್ರಾಕ್ಷಿ ನಾಶವಾಗಿದೆ.
ಚಿಕ್ಕೋಡಿಯ ಉಪವಿಭಾಗದಲ್ಲಿ ಬರುವ ಅಥಣಿ, ರಾಯಬಾಗ, ಕಾಗವಾಡ, ಅಕಾಲಿಕ ಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಅಪಾರ ಪ್ರಮಾಣದ ಒಣ ದ್ರಾಕ್ಷಿ, ಮಾವು ಬೆಳೆ ನಾಶವಾಗಿದೆ.
ಅಲ್ಲದೇ ಅಥಣಿ ಮತ್ತು ಕಾಗವಾಡದಲ್ಲಿ ಉಂಟಾದ ಗಾಳಿ ಸಹಿತ ಮಳೆಯಿಂದ ಹಲವು ಮರಗಳು ಧರೆಗುರಳಿವೆ. ಹಾಗೇ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಆಲಿಕಲ್ಲು ಮಳೆಯಿಂದ 10ಕ್ಕೂ ಹೆಚ್ಚು ವಿದ್ಯುತ್ ಕಂಬ, ಟ್ರಾನ್ಸ್ಫರ್ಮರ್ ಧರೆಗುರಳಿವೆ.
ಇನ್ನೂ ಗಾಳಿಗೆ 50ಕ್ಕೂ ಹೆಚ್ಚೂ ಮನೆಗಳಿಗೆ ಹಾಕಿದ್ದ ಶೀಟ್ ಗಳು ಹಾರಿಹೋಗಿವೆ. ಇದರಿಂದ ಜನರು ಸೂರು ಇಲ್ಲದೆ ಪರದಾಡುತ್ತಿದ್ದಾರೆ. ಮಳೆ-ಗಾಳಿಗೆ ಒಣ ದ್ರಾಕ್ಷಿ ಮತ್ತು ಮಾವು ಬೆಳೆ ನಾಶವಾಗಿದ್ದರಿಂದ ರೈತರು ಕಂಗಳಾಗಿದ್ದಾರೆ.
Post a Comment