ಮಂಗಳೂರು: ನಗರದ ನ್ಯಾಯವಾದಿ ಶೇಂತಾರು ಮಹಾಲಿಂಗೇಶ್ವರ ಭಟ್ಟರ ಯೆಯ್ಯಾಡಿಯ ನಿವಾಸದಲ್ಲಿ ದಿನಾಂಕ 16ರಂದು ಶನಿವಾರ ವಿಶೇಷವಾದ ಹನುಮಜ್ಜಯಂತಿಯನ್ನು ಶ್ರದ್ಧಾ ಭಕ್ತಿಗಳಿಂದ ವಿವಿಧ ಧಾರ್ಮಿಕ ವೈದಿಕ ಆಚರಣೆಗಳೊಂದಿಗೆ ಆಚರಿಸಲಾಯಿತು.
ಹರಿಕಥಾ ಕಲಾವಿದ ಶಂ. ನಾ. ಅಡಿಗ ಕುಂಬಳೆ ಇವರು ಹನುಮಕಥೆ ಎಂಬ ಕಥಾ ಭಾಗದ ಸೋದಾಹರಣ ಉಪನ್ಯಾಸ ನಡೆಸಿಕೊಟ್ಟರು. ಆಯುಸ್ಸು, ಬುದ್ಧಿ, ಬಲ, ತೇಜಸ್ಸು, ಜಾಗೃತಶಕ್ತಿಗಳನ್ನು ಉದ್ದೀಪಿಸುವ ಚಿರಂಜೀವಿ ಹನುಮ ಕ್ರಿಯಾಶೀಲತೆ ಮತ್ತು ಕರ್ತೃತ್ವಶಕ್ತಿಗೆ ದೃಷ್ಟಾಂತ ಎಂಬುದನ್ನು ಅವರು ಸೋದಾಹರಣವಾಗಿ ವಿವರಿಸಿದರು.
ಅನಂತರ ವೈದಿಕ ಕಲ್ಪೋಕ್ತ ಹನುಮ ಪೂಜೆ ಏರ್ಪಟ್ಟಿತು. ಬಹುಜನ ಭಕ್ತಾದಿಗಳು ಸೇರಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಟ್ಟರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment