ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ರಿಗೆ ಬಹುಮುಖ ಪ್ರತಿಭಾ ಪ್ರಶಸ್ತಿ ಪ್ರದಾನ

ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ರಿಗೆ ಬಹುಮುಖ ಪ್ರತಿಭಾ ಪ್ರಶಸ್ತಿ ಪ್ರದಾನ


ಸುಳ್ಯ: ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ, ಸಂಘಟಕ, ಗಾಯಕ ಮತ್ತು ಜ್ಯೋತಿಷಿಯಾದ ಎಚ್. ಭೀಮರಾವ್ ವಾಷ್ಠರ್ ಕೋಡಿಹಾಳ ರವರಿಗೆ 2022ನೇ ಸಾಲಿನ ಬಹುಮುಖ ಪ್ರತಿಭಾ ಪ್ರಶಸ್ತಿಯನ್ನು ಇತ್ತೀಚಿಗೆ ಉಪ್ಪಿನಂಗಡಿಯ ನೆಕ್ಕಿಲಾಡಿ 34 ರ ಶಾಂತಾ ಸಭಾಭವನದಲ್ಲಿ ಸತ್ಯಶಾಂತ ಪ್ರತಿಷ್ಠಾನದ 3ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಭಗವದ್ಗೀತಾ ವಿಶ್ವ ವೈಭವ ಸಮಾರಂಭದಲ್ಲಿ ನೀಡಲಾಯಿತು.


ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಖಿಲ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ  ಪುನರೂರು, ಭುವನಾಭಿರಾಮ ಉಡುಪ, ಒಡಿಯೂರು ಮಠದ ಶ್ರೀ ಗುರು ದೇವಾನಂದ ಸ್ವಾಮೀಜಿ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀ ಅಶ್ರಣ್ಣ, ಪಿ ವಿ ಪ್ರದೀಪ್ ಕುಮಾರ್, ಸತ್ಯಶಾಂತ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ಶಾಂತಾ ಕುಂಟಿನಿ, ಹೈಕೋರ್ಟ್ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿರುವ ನ್ಯಾಯಮೂರ್ತಿ ಶ್ರೀ ಅರಳಿ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم