ಮಂಗಳೂರು: ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಆರೋಗ್ಯ ಭಾರತಿ ಮಂಗಳೂರು ಇವರ ಸಂಯೋಗದೊಂದಿಗೆ ಮನೆ ಮನೆ ಯೋಗ ಕಾರ್ಯಕ್ರಮವು ಕುಂಟಿಕಾನ, ಪ್ರಶಾಂತ ನಗರದ ಪ್ರಮುಖ ಸಮುಚ್ಚಯ ಕೇಂದ್ರ “ಭಾರತ ಆಶ್ರಯ” ದಲ್ಲಿ ಯೋಗ ಶಿಕ್ಷರಾದ ಸುಮಾ ಹಾಗೂ ಡಾ. ರಾಜಶ್ರೀ ಮುರಳಲೀ ಮೋಹನ್ ಚೂಂತಾರು ಇವರಿಂದ ಪ್ರಾರಂಭಗೊಂಡಿದೆ.
ಇದು ಮಂಗಳೂರು ನಗರ, ಗ್ರಾಮಾಂತರ ಹಾಗೂ ದ.ಕ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಆರೋಗ್ಯಭಾರತಿ ಗೌರವ ಅಧ್ಯಕ್ಷರು ಹಾಗೂ ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ ಚೂಂತಾರು ಹಾಗೂ ಮಂಗಳೂರು ನಗರ ಅಧ್ಯಕ್ಷರು ಡಾ. ಶರತ್ ಕುಮಾರ್ ತಿಳಿಸಿದರು.
ಆರೋಗ್ಯ ಭಾರತಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಹಾಗೂ ವಿಭಾಗ ಸಂಯೋಜಕ ಪುರುಷೋತ್ತಮ ಗೌಡ ದೇವಸ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರುಷೋತ್ತಮ ದೇವಸ್ಯ, ಮನೆ ಮನೆಗಳಲ್ಲಿ ನಿತ್ಯ ಯೋಗ ಆರಂಭಿಸುವ ಕಾರ್ಯವನ್ನು ಆರೋಗ್ಯ ಭಾರತಿ ಹಮ್ಮಿಕೊಂಡಿದೆ. ನಿತ್ಯ ಯೋಗ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ದಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment