ಕಾಸರಗೋಡು: ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಕಾಂಗ್ರೆಸ್ ಮುಖಂಡ ಮೃತಪಟ್ಟಿರುವ ಘಟನೆಯೊಂದು ಬುಧವಾರ ಸಂಜೆ ಕಾಞಂಗಾಡ್‌ನ ಮಣಿಯಾಟ್ ನಲ್ಲಿ ನಡೆದಿದೆ.
ಕಾಞಂಗಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ . ವಿ ಬಾಲಕೃಷ್ಣನ್ ( 64) ಮೃತಪಟ್ಟವರು.
ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಕಡಿದು ಬಿದ್ದಿದ್ದ ತಂತಿ ತಗಲಿ ದುರಂತ ಸಂಭವಿಸಿದೆ.
ಸಂಜೆ ಭಾರೀ ಗಾಳಿ ಮಳೆಗೆ ವಿದ್ಯುತ್ ತಂತಿ ಕಡಿದು ಬಿದ್ದಿದ್ದು ಈ ರಸ್ತೆಯಾಗಿ ಬರುತ್ತಿದ್ದ ಬಾಲಕೃಷ್ಣ ಅವರ ಸ್ಕೂಟರ್ ತಂತಿ ತಗುಲಿ ಈ ದಾರುಣ ಘಟನೆ ನಡೆದಿದೆ.
ಜೊತೆಗಿದ್ದ ಮೊಮ್ಮಗಳು ಅಪಾಯದಿಂದ ಪಾರಾಗಿದ್ದಾರೆ , ಬಾಲಕೃಷ್ಣನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಗಳ ಮನೆಗೆ ಬಂದು ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
Post a Comment