ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದ.ಕ ಗೃಹರಕ್ಷಕ ದಳದ ಇಬ್ಬರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಚಿನ್ನದ ಪದಕ

ದ.ಕ ಗೃಹರಕ್ಷಕ ದಳದ ಇಬ್ಬರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಚಿನ್ನದ ಪದಕ


ಮಂಗಳೂರು: ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ ಮತ್ತು ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಶೇರಾ ಇವರ ಹೆಸರನ್ನು ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ ಚೂಂತಾರು ಶಿಫಾರಸ್ಸು ಮಾಡಿದ್ದು, ಅವರಿಗೆ 2021ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಣೆಯಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.


ಬೆಳ್ತಂಗಡಿ ಘಟಕದ ಪ್ರಭಾರ ಘಟಕಾಧಿಕಾರಿ ಜಯಾನಂದ ಇವರು ದಿನಾಂಕ: 01-11-1989ರಲ್ಲಿ ಇಲಾಖೆಗೆ ಸೇರಿ ಸುಮಾರು 33 ವರ್ಷಗಳ ಕಾಲ ನಿಷ್ಕಾಮ ಸೇವೆಯನ್ನು ಸಲ್ಲಿಸಿರುತ್ತಾರೆ. ಸದರಿಯವರು ಪ್ರವಾಹ ರಕ್ಷಣಾ  ಕರ್ತವ್ಯ, ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ, ಕಾನೂನು ಸುವ್ಯವಸ್ಥೆ ಕರ್ತವ್ಯಗಳಾದ ಚುನಾವಣೆ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಸಾಮಾಜಿಕ ಕಳಕಳಿ ಇರುವ ಇವರ ಸೇವಾಮನೊಭಾವ ಮತ್ತು ಪ್ರಾಮಾಣಿಕತೆಗೆ ಸಾರ್ವಜನಿಕರಿಂದಲೂ ಪ್ರಶಂಸನೆಯನ್ನು ಪಡೆದಿರುತ್ತಾರೆ ಹಾಗೂ ಇವರು ಇತರ ಗೃಹರಕ್ಷಕರಿಗೆ ಮಾದರಿ ಎಂದೂ ಸಮಾದೇಷ್ಟರು ತಿಳಿಸಿರುತ್ತಾರೆ.


ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಶೇರಾ ಇವರು ದಿನಾಂಕ: 01-03-1999 ರಲ್ಲಿ ಇಲಾಖೆಗೆ ಸೇರಿ ಸುಮಾರು 23 ವರ್ಷಗಳ ಕಾಲ ನಿಷ್ಕಾಮ ಸೇವೆಯನ್ನು ಸಲ್ಲಿಸಿರುತ್ತಾರೆ. ಸದರಿಯವರು ಪ್ರವಾಹ ರಕ್ಷಣಾ ಕರ್ತವ್ಯ, ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ, ಕಾನೂನು ಸುವ್ಯವಸ್ಥೆ ಕರ್ತವ್ಯಗಳಾದ ಚುನಾವಣೆ, ಗಣೇಶ್ ಹಬ್ಬದ ಬಂದೋಬಸ್ತ್, ದಸರಾ ಬಂದೋಬಸ್ತ್ ಕರ್ತವ್ಯಗಳನ್ನು ನಿರ್ವಹಿಸಿರುತ್ತಾರೆ. ಸಾಮಾಜಿಕ ಕಳಕಳಿ ಇರುವ ಇವರ ಸೇವಾಮನೊಭಾವ ಮತ್ತು ಪ್ರಾಮಾಣಿಕತೆಗೆ ಸಾರ್ವಜನಿಕರಿಂದಲೂ ಪ್ರಶಂಸನೆಯನ್ನು ಪಡೆದಿರುತ್ತಾರೆ ಹಾಗೂ ಇವರು ಇತರ ಗೃಹರಕ್ಷಕರಿಗೆ ಮಾದರಿ ಎಂದೂ ಸಮಾದೇಷ್ಟರು ತಿಳಿಸಿರುತ್ತಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post