ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ವತಿಯಿಂದ ದಿವ್ಯ ಸಂದೇಶಗಳ ಫಲಕ ಬಿಡುಗಡೆ ಕಾರ್ಯಕ್ರಮವು ಕೇರ್ಪಳದ ರುದ್ರಭೂಮಿಯಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕರಾದ ಬ್ರಹ್ಮಕುಮಾರಿ ಉಮಾದೇವಿ ಅವರು ವಹಿಸಿದ್ದರು.
ಫಲಕ ಉದ್ಘಾಟನೆಯನ್ನು ನಗರ ಪಂಚಾಯತ್ ಸದಸ್ಯರಾದ ಸುಧಾಕರ್ ಕೇರ್ಪಳ ರವರು ಮಾಡಿದರು. ಮಂಜುನಾಥ ಮೇಸ್ತ್ರಿ ಮತ್ತು ಹಿರಿಯ ನಾಗರಿಕರಾದ ಗೋಪಾಲ್ ಕೇರ್ಪಳ ರವರು ಮುಖ್ಯ ಅತಿಥಿಗಳಾಗಿದ್ದರು. ರಂಜಿತ್ ಮತ್ತು ರಾಜಶೇಖರ್ ರವರು ಉಪಸ್ಥಿತರಿದ್ದರು. ಸುಳ್ಯದ ಜ್ಯೋತಿಷಿ ಮತ್ತು ಸಾಹಿತಿ ಎಚ್. ಭೀಮರಾವ್ ವಾಷ್ಠರ್ ಸುಳ್ಯ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಕ್ರಿಯ ಕಾರ್ಯಕರ್ತರಾದ ಉಮೇಶ್ ಆಚಾರ್ಯ ಜಟ್ಟಿಪಳ್ಳರವರು ಧನ್ಯವಾದ ಸಮರ್ಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق