ಮಂಗಳೂರು: ನಗರದ ನಂತೂರಿನಲ್ಲಿರುವ ಶ್ರೀ ಭಾರತಿ ಕಾಲೇಜು ಇದರ ಸಭಾಂಗಣದಲ್ಲಿ ಭಾನುವಾರ (ಏ.3) ಉಚಿತ ಎಲುಬು ಸಾಂದ್ರತೆ ತಪಾಸಣಾ ಶಿಬಿರ ಜರುಗಲಿದೆ.
ಹವ್ಯಕ ಸಭಾ ಮಂಗಳೂರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವೇದಮಾಯು ಆಸ್ಪತ್ರೆ ಇವರ ಸಹಕಾರದೊಂದಿಗೆ ಈ ಶಿಬಿರ ಜರುಗಲಿದ್ದು, ಪೂರ್ವಹ್ನ 10;00 ರಿಂದ ಅಪರಾಹ್ನ 1 ರವರೆಗೆ ಈ ಶಿಬಿರ ನಡೆಯಲಿದೆ ಎಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಇದರ ಕಾರ‍್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ತಿಳಿಸಿರುತ್ತಾರೆ.
ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق