ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮನೆ ನಿರ್ಮಾಣದ ಹಲವು ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ

ಮನೆ ನಿರ್ಮಾಣದ ಹಲವು ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ

 


ಬೆಂಗಳೂರು :  ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್, ಕಬ್ಬಿಣ, ಸಿಮೆಂಟ್ ಸೇರಿದಂತೆ ಮನೆ ನಿರ್ಮಾಣದ ಹಲವು ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ಜಿಎಸ್‌ಟಿ ಮತ್ತು ಇಂಧನ ದರ ಏರಿಕೆಯಿಂದ ನಿರ್ಮಾಣ ಪರಿಕರಗಳ ಬೆಲೆಯೂ ಏರಿಕೆಯಾಗಿದ್ದು, ಹಿಂದಿನ ವರ್ಷ ಶೇ 40ರಿಂದ ಶೇ 50ರಷ್ಟು ಹೆಚ್ಚಳವಾಗಿದ್ದ ದರ, ಈಗ ಮತ್ತೆ ಶೇ 15ರಿಂದ ಶೇ 20ರಷ್ಟು ಹೆಚ್ಚಾಗಿದೆ.

ಸಾಧಾರಣ ದರ್ಜೆಯ 10 ಚದರ ಮನೆ ನಿರ್ಮಾಣಕ್ಕೆ ಒಂದು ವರ್ಷದ ಹಿಂದೆ 15 ಲಕ್ಷ ಇದ್ದ ನಿರ್ಮಾಣ ವೆಚ್ಚ 2021ರ ನವೆಂಬರ್ ವೇಳೆಗೆ 20 ಲಕ್ಷ ದಾಟಿತ್ತು. ಈಗ 25 ಲಕ್ಷ ಮೀರಿದೆ ಎಂದು ಅಂದಾಜಿಸಲಾಗಿದೆ.


ಇನ್ನು ಮನೆಯ ಒಳಾಂಗಣಕ್ಕೆ ಬಳಸುವ ಟೈಲ್ಸ್, ಸ್ಯಾನಿಟರಿ ಸಲಕರಣೆ, ಬಣ್ಣ, ಎಲೆಕ್ಟ್ರಿಕಲ್ ವಸ್ತುಗಳು ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಕಬ್ಬಿಣದ ಬೆಲೆ 1 ಟನ್ ಗೆ 90 ಸಾವಿರ ರೂ. ದಿಂದ 99 ಸಾವಿರ ರೂ. ತನಕ ಏರಿಕೆಯಾಗಿದೆ. ಸಿಮೆಂಟ್‌ ದರವೂ ಚೀಲಕ್ಕೆ 50 ರೂ. ಹೆಚ್ಚಾಗಿದೆ.

0 تعليقات

إرسال تعليق

Post a Comment (0)

أحدث أقدم