ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಏ. 10ಕ್ಕೆ ಕಾಟುಕುಕ್ಕೆಯಲ್ಲಿ "ಆರ್‌ಎಸ್‌ಬಿ ಯುವ ಟ್ರೋಫಿ 2022" ಕ್ರಿಕೆಟ್ ಪಂದ್ಯಾಟ

ಏ. 10ಕ್ಕೆ ಕಾಟುಕುಕ್ಕೆಯಲ್ಲಿ "ಆರ್‌ಎಸ್‌ಬಿ ಯುವ ಟ್ರೋಫಿ 2022" ಕ್ರಿಕೆಟ್ ಪಂದ್ಯಾಟ



ಪೆರ್ಲ: ಆರ್ ಎಸ್ ಬಿ ಯುವ ಸಂಘ ಮೊಗೇರು ಇದರ ಸಹಯೋಗದಲ್ಲಿ ಸ್ವ ಸಮಾಜ ಬಾಂಧವರ ಐದನೇ ವರ್ಷದ ನಿಗದಿತ ಓವರುಗಳ ಒಂಬತ್ತು ಜನರ ಮುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಏಪ್ರಿಲ್ 10ರಂದು ಕಾಟುಕುಕ್ಕೆ ಬಿ.ಎ. ಯುಪಿ ಶಾಲಾ ಮೈದಾನದಲ್ಲಿ ಜರಗಲಿದೆ.


ಅಂದು 8:00 ಗಂಟೆಗೆ ನಡೆಯುವ ಸಮಾರಂಭದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಪಂದ್ಯಾಟ ಉದ್ಘಾಟಿಸುವರು. ಆರ್‌ಎಸ್‌ಬಿ ಯುವ ಸಂಘ ಮೊಗೇರು ಇದರ ಅಧ್ಯಕ್ಷ ನಿತೇಶ್ ಕೆ.ವಿ. ಅಧ್ಯಕ್ಷತೆ ವಹಿಸುವರು. ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ರಾಮಚಂದ್ರನಾಯಕ್ ಆಲ್ಚಾರು, ನಿವೃತ್ತ ಜಿಲ್ಲಾ ಅಧಿಕಾರಿ ಸದಾಶಿವ ನಾಯಕ್ ನೆರೋಳು, ಸ್ವರ್ಗ ಶಾಲಾ ಅಧ್ಯಾಪಕ ಸಚ್ಚಿದಾನಂದ ಭಟ್, ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅರ್ಚಕ ಸತೀಶ್ ಭಟ್ ಮುಖ್ಯ ಅತಿಥಿಗಳಾಗಿರುವರು. ಅಂದು ಸಂಜೆ 5 ಗಂಟೆಗೆ ಜರಗುವ ಸಮಾರೋಪ ಸಮಾರಂಭದಲ್ಲಿ ರಮೇಶ್ ವಾಗ್ಲೆ ಕುರಿಯತಡ್ಕ ಅಧ್ಯಕ್ಷತೆ ವಹಿಸುವರು.


ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ತೋಟದಮನೆ, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಕತ್ತಲುಕಾನ, ಕಾಟುಕುಕ್ಕೆ ಬಿಎಯುಪಿ ಶಾಲಾ ಬಾಲಕ ಕೃಷ್ಣಭಟ್ ಕುಂಚಿನಡ್ಕ, ದೇವಾನಂದ ಶರ್ಮ ಪಂಜಿಕಲ್ಲು, ಕರಿಂಬಿಲ ಲಕ್ಷ್ಮಣ ಪ್ರಭು ಮೊದಲಾದವರು ಪಾಲ್ಗೊಳ್ಳುವರು. ಪಂದ್ಯಾಟದಲ್ಲಿ ಪ್ರಥಮ ನಗದು ರೂ. 5022 ಹಾಗೂ ಶಾಶ್ವತ ಫಲಕ ದ್ವಿತೀಯ ರೂ 3022 ಹಾಗೂ ಶಾಶ್ವತ ಫಲಕ, ಸರಣಿ ಶ್ರೇಷ್ಠ, ಪಂದ್ಯಶ್ರೇಷ್ಠ, ಗೌರವ ಪದಕ ವಿತರಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 Comments

Post a Comment

Post a Comment (0)

Previous Post Next Post