ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಸ್ತೆ ಅಪಘಾತ ದಲ್ಲಿ ಯೂಟ್ಯೂಬರ್ ಜೂನಿಯರ್ ಆರ್ಟಿಸ್ಟ್ ಗಾಯತ್ರಿ ಸಾವು

ರಸ್ತೆ ಅಪಘಾತ ದಲ್ಲಿ ಯೂಟ್ಯೂಬರ್ ಜೂನಿಯರ್ ಆರ್ಟಿಸ್ಟ್ ಗಾಯತ್ರಿ ಸಾವು

 


ಹೈದರಾಬಾದ್​ : ಯೂಟ್ಯೂಬರ್ ಜೂನಿಯರ್​ ಆರ್ಟಿಸ್ಟ್ ಆಗಿ ವಿಶಿಷ್ಟ ಮನ್ನಣೆ ಗಳಿಸಿದ್ದ ಗಾಯತ್ರಿ ನಿನ್ನೆ ರಾತ್ರಿ ಹೈದರಾಬಾದ್​ನ ಗಚ್ಚಿಬೌಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ಹೋಳಿ ಹಬ್ಬದ ದಿನ, ಗಾಯತ್ರಿ ತನ್ನ ಸ್ನೇಹಿತ ರೋಹಿತ್‌ನೊಂದಿಗೆ ಪಬ್‌ನಿಂದ ವಾಪಸ್ಸಾಗುತ್ತಿದ್ದ ವೇಳೆ ಹೈದರಾಬಾದ್​ನ ವಿಪ್ರೋ ಜಂಕ್ಷನ್‌ನಿಂದ ಗಚ್ಚಿಬೌಲಿಗೆ ತೆರಳುತ್ತಿದ್ದರು.

ಈ ವೇಳೆ ಫುಟ್ ಪಾತ್ ಮೇಲೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರ ಪರಿಣಾಮ ಗಾಯತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ರೋಹಿತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವನ ಸ್ಥಿತಿಯೂ ಚಿಂತಾಜನಕವಾಗಿದೆ ಎನ್ನಲಾಗಿದೆ.

ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದ ಇಬ್ಬರೂ ಪಾರ್ಟಿಯಲ್ಲಿ ಕೂಡ ಕಂಠಪೂರ್ತಿ ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಗಾಯತ್ರಿ ಯವರೇ ಕಾರು ಚಲಾಯಿಸುತ್ತಿದ್ದರು ಎಂಬ ಮಾಹಿತಿ ಇದೆ. ಹೆಚ್ಚು ವೇಗದಲ್ಲಿ ಕಾರನ್ನು ಚಲಾಯಿಸಿರುವುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತನಿಖೆಯ ವೇಳೆ ತಿಳಿಸಿದ್ದಾರೆ

hit counter

0 تعليقات

إرسال تعليق

Post a Comment (0)

أحدث أقدم